KGF ತಂಗಲಾನ್; ರಿಹರ್ಸಲ್ ವೇಳೆ ನಟ ವಿಕ್ರಮ್‌ಗೆ ಪಕ್ಕೆಲುಬು ಮುರಿತ
ಚೆನ್ನೈ; ಕೋಲಾರ ಚಿನ್ನದ ಗಣಿಯ ಕಾರ್ಮಿಕರ ಸುತ್ತ ಕಥೆ ಹೆಣೆದಿರುವ ತಂಗಲಾನ್ ಸಿನಿಮಾದ ಶೂಟಿಂಗ್ ರಿಹರ್ಸಲ್ ವೇಳೆ ನಟ ಚಿಯಾನ್ ವಿಕ್ರಮ್‌ಗೆ ತೀವ್ರ ಗಾಯಗಳಾಗಿವೆ. ಇತ್ತೀಚೆಗಷ್ಟೇ ಅವರು ಪೊನ್ನಿಯನ್ ಸೆಲ್ವನ್ -೨ ಸಿನಿಮಾದ ಪ್ರಚಾರ ಮುಗಿಸಿ, ತಂಗಲಾನ್ ಚಿತ್ರದ ಶೂಟಿಂಗ್‌ಗೆ ಹಾಜರಾಗಿದ್ದರು. ರಿಹರ್ಸಲ್ ವೇಲೆ ಅವರು ಬಿದ್ದಿದ್ದು, ಅವರ ಪಕ್ಕೆಲುಬು ಮುರಿದಿದೆ. ಇದರಿಂದಾಗಿ ಶೂಟಿಂಗ್ ನಿಲ್ಲಿಸಲಾಗಿದೆ.
ಈ ಚಿತ್ರಕ್ಕಾಗಿ ಸೆಟ್ ಹಾಕಲಾಗಿದ್ದು, ಅದರಲ್ಲಿ ಚಿಕ್ರಮ್ ರಿಹರ್ಸಲ್ ಮಾಡುತ್ತಿದ್ದರು. ಈ ವೇಳೆ ಆಯ ತಪ್ಪಿ ಅವರು ಬಿದ್ದಿದ್ದಾರೆ. ಕೂಡಲೇ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಪಕ್ಕೆಲುಬು ಮುರಿದಿರುವುದರಿಂದ ರೆಸ್ಟ್ ಬೇಕು ಎಂದು ವೈದ್ಯರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಶೂಟಿಂಗ್ ನಿಲ್ಲಿಸಲಾಗಿದೆ. ವಿಕ್ರಮ್ ಆರೋಗ್ಯವಾದ ಮೇಲೆ ಶೂಟಿಂಗ್ ಮುಂದುವರೆಸುತ್ತೇವೆ ಎಂದು ಚಿತ್ರ ತಂಡ ಹೇಳಿಕೊಂಡಿದೆ.
ಈ ಹಿಂದೆ ಕೂಡಾ ವಿಕ್ರಮ್ ಇದೇ ಸೆಟ್‌ನಲ್ಲಿ ಗಾಯಗೊಂಡಿದ್ದರು. ಇದೀಗ ಮತ್ತೆ ಅವರು ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ವಿಕ್ರಮ್ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಭಿಮಾನಿಗಳು ಶೀಘ್ರ ಗುಣಮುಖರಾಗಲೆಂದು ಪ್ರಾರ್ಥಿಸುತ್ತಿದ್ದಾರೆ.