DistrictsHealth

ಗ್ರಾಮಸ್ಥರೆಲ್ಲರಿಗೂ ಜ್ವರದ ಕಾಟ; ಹೆಚ್ಚಿದ ಆತಂಕ

ದಾವಣಗೆರೆ; ಕೊರೊನಾ ಉಪತಳಿ ಜೆಎನ್‌.1 ಭೀತಿ ಹುಟ್ಟಿಸಿದೆ. ಹೀಗಿರುವಾಗಲೇ ದಾವಣಗೆರೆ ಬಳಿಯ ಗ್ರಾಮವೊಂದರಲ್ಲಿ ಎಲ್ಲರಿಗೂ ಜ್ವರ, ಮೈ- ಕೈ ನೋವು ಕಾಣಿಸಿಕೊಂಡಿದೆ. ಹೊನ್ನೂರು ಗ್ರಾಮದ ಬಹುತೇಕ ಎಲ್ಲರಿಗೂ ಒಂದು ವಾರದಿಂದ ಜ್ವರ, ಮೈ- ಕೈ ನೋವು ಕಾಣಿಸಿಕೊಂಡಿದೆ. ಈ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳೀಯ ಶಾಸಕ ಬಸವಂತಪ್ಪ ಅವರು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ತಪಾಸಣೆ ನಡೆಸಿದ್ದು, ಗ್ರಾಮದ 25ಕ್ಕೂ ಹೆಚ್ಚು ಮಂದಿಗೆ ಚಿಕೂನ್ ಗುನ್ಯಾ ಇರುವುದು ಪತ್ತೆಯಾಗಿದೆ. ಸೊಳ್ಳೆಗಳಿಂದ ಇಡೀ ಗ್ರಾಮಕ್ಕೆ ಚಿಕೂನ್ ಗುನ್ಯಾ ಹರಡಿದೆ ಎಂದು ಹೇಳಲಾಗಿದೆ. ಹೀಗಾಗಿ ಗ್ರಾಮದ ಜನರಿಗೆ ಔಷಧ ಉಪಚಾರಗಳನ್ನ ತೆಗೆದುಕೊಂಡು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಲಾಗಿದೆ.

Share Post