ಸ್ಟಾಕ್ ಮಾರುಕಟ್ಟೆ ದಿಢೀರ್ ಪತನಕ್ಕೆ ಕಾರಣ ಏನು..?; ಇವತ್ತಿನ ಸ್ಥಿತಿ ಏನು ಹೇಳುತ್ತೆ..?
ದೇಶಿ ಷೇರು ಮಾರುಕಟ್ಟೆ ಸೂಚ್ಯಂಕಗಳು ನಿನ್ನೆ ಭಾರೀ ನಷ್ಟದೊಂದಿಗೆ ಅಂತ್ಯಗೊಂಡಿವೆ. ಇವತ್ತೂ ಕೂಡಾ ಇದೇ ಸ್ಥಿತಿ ಮುಂದುವರೆಯುವ ಸಾಧ್ಯತೆ ಇದೆ.. ನಿನ್ನೆ ಆರಂಭದಿಂದಲೇ ಭಾರಿ ನಷ್ಟದೊಂದಿಗೆ ವಹಿವಾಟು ಆರಂಭವಾಯಿತು. 2400 ಅಂಕಗಳ ನಷ್ಟದೊಂದಿಗೆ ಆರಂಭವಾದ ಸೆನ್ಸೆಕ್ಸ್ 2600 ಅಂಕಗಳವರೆಗೆ ನಷ್ಟ ಅನುಭವಿಸಿದೆ. ನಿಫ್ಟಿ ಕೂಡ ವಹಿವಾಟಿನ ಆರಂಭದಿಂದಲೇ ನಷ್ಟ ಅನುಭವಿಸುತ್ತಾ ಹೋಯಿತು. ಇದು ಅಂತಿಮವಾಗಿ 24,000 ಕ್ಕಿಂತ ಹೆಚ್ಚು ಚೇತರಿಸಿಕೊಂಡಿತು.
ಇದನ್ನೂ ಓದಿ; ಬೈಕ್‌ಗೆ ಸರ್ಕಾರಿ ಬಸ್ ಡಿಕ್ಕಿ; ತುಮಕೂರಿನಲ್ಲಿ ವ್ಯಕ್ತಿ ಸಾವು!
ಕಳೆದ ವಾರ 25,000 ಗಡಿ ದಾಟುವ ಮೂಲಕ ದಾಖಲೆ ಸೃಷ್ಟಿಸಿದ್ದ ನಿಫ್ಟಿ ವಾರಾಂತ್ಯದಲ್ಲಿ ಮಾರಾಟದ ಭೀತಿ ಎದುರಿಸಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಬರುತ್ತಿರುವ ನಕಾರಾತ್ಮಕ ಸಂಕೇತಗಳಿಂದ ದೇಶೀಯ ಸ್ಟಾಕ್ ಮಾರುಕಟ್ಟೆಗಳೂ ನಷ್ಟ ಅನುಭವಿಸುತ್ತಿವೆ. ಶುಕ್ರವಾರ ಅಮೆರಿಕ ಬಿಡುಗಡೆ ಮಾಡಿದ ಜುಲೈ ಉದ್ಯೋಗಗಳ ಅಂಕಿ ಅಂಶಗಳ ಪಟ್ಟಿ ಉದ್ಯೋಗ ಸೃಷ್ಟಿ ನಿರೀಕ್ಷೆಗಿಂತ ಕಡಿಮೆಯಾಗಿದೆ ಎಂದು ಹೇಳಿದೆ.. ಅಮೆರಿದಲ್ಲಿ ನಿರುದ್ಯೋಗ ದರವು ಮೂರು ವರ್ಷಗಳ ಗರಿಷ್ಠ ಮಟ್ಟ ತಲುಪಿದೆ. ಇದರೊಂದಿಗೆ ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭೀತಿ ಶುರುವಾಗಿದದ್ದು, ಇದರಿಂದಾಗಿ ಅಲ್ಲಿನ ಮಾರುಕಟ್ಟೆಗಳು ನಷ್ಟ ಎದುರಿಸುತ್ತಿವೆ. ಇದರ ಜೊತೆಗೆ, ಮಧ್ಯಪ್ರಾಚ್ಯದಲ್ಲಿ ಭೌಗೋಳಿಕ ರಾಜಕೀಯ ಪರಿಸ್ಥಿತಿ ಕೂಡಾ ಅಪಾಯಕಾರಿಯಾಗಿದೆ. ಈ ಎಲ್ಲಾ ಆತಂಕಗಳು ಪ್ರಸ್ತುತ ಏಷ್ಯಾದ ಮಾರುಕಟ್ಟೆಗಳ ಮೇಲೆ ತೂಗುತ್ತಿವೆ.
ಇದನ್ನೂ ಓದಿ; ಬೇರೊಬ್ಬನ ಜೊತೆ ಕಾಣಿಸಿಕೊಂಡ ಪ್ರೇಯಸಿ!; ಪ್ರಿಯತಮ ಮಾಡಿದ್ದೇನು ಗೊತ್ತಾ..?
ಸ್ಟಾಕ್ ಮಾರುಕಟ್ಟೆಗಳು ಏರಿಕೆಯಾಗುತ್ತಿದ್ದಂತೆ ಡಾಲರ್ ಎದುರು ದೇಶೀಯ ಕರೆನ್ಸಿ ರೂಪಾಯಿ ಜೀವಮಾನದ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಶುಕ್ರವಾರ ಡಾಲರ್ ಎದುರು ರೂಪಾಯಿ ಮೌಲ್ಯ ರೂ. 83.75 ಇದ್ದರೆ, ಸೋಮವಾರ ರೂ. 83.85ರಲ್ಲಿ ವಹಿವಾಟು ನಡೆಸಿದೆ. ಅದೇ ಸಮಯದಲ್ಲಿ, ಬ್ಯಾಂಕ್ ಆಫ್ ಜಪಾನ್ ಬಡ್ಡಿದರಗಳನ್ನು ಹೆಚ್ಚಿಸಿದ್ದರಿಂದ US ಡಾಲರ್ ವಿರುದ್ಧ ಯೆನ್ ಬಲಗೊಂಡಿತು. ವಿದೇಶಿ ಹೂಡಿಕೆದಾರರಿಗೆ ಟೋಕಿಯೋ ಷೇರುಗಳು ದುಬಾರಿಯಾಗಿವೆ.
ಇದನ್ನೂ ಓದಿ; ಸಿಸಿಬಿ ಇನ್ಸ್‌ಪೆಕ್ಟರ್ ತಿಮ್ಮೇಗೌಡ ಆತ್ಮಹತ್ಯೆ!; ಅಮಾನತಾಗಿದ್ದರಿಂದ ಖಿನ್ನತೆ!