EconomyLifestyle

ತಿಂಗಳಿಗೆ 5 ಸಾವಿರ ರೂಪಾಯಿ ಉಳಿತಾಯ ಮಾಡಿ, ಕೋಟ್ಯಧೀಶರಾಗಿ..!

ಬೆಂಗಳೂರು; ಖಾಸಗಿ ಕಂಪನಿಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು, ತಿಂಗಳಿಗೆ 20, 25 ಸಾವಿರ ರೂಪಾಯಿ ಸಂಪಾದನೆ ಮಾಡುವವರಿಗೆ ಕೋಟಿ ಅನ್ನೋದು ಕನಸಿನ ಮಾತು. ಆದ್ರೆ ಅವರಿಗೆ ಗೊತ್ತಿಲ್ಲ. ಸಿಸ್ಟಮೇಟಿಕ್‌ ಆಗಿ ಉಳಿತಾಯ ಮಾಡಿದರೆ, ಅಂತಹವರು ಕೂಡಾ ಕೋಟ್ಯಧೀಶರಾಗಬಹುದು. ತಿಂಗಳಿಗೆ ಐದು ಸಾವಿರ ರೂಪಾಯಿ ಉಳಿತಾಯ ಮಾಡಿದರೆ ಖಂಡಿತ ಕೋಟ್ಯಧೀಶರಾಗಬಹುದು. ಅಷ್ಟೇ ಏಕೆ 50 ವರ್ಷಕ್ಕೆ ನಿವೃತ್ತಿ ತೆಗೆದುಕೊಂಡು ತಿಂಗಳಿಗೆ 1 ಲಕ್ಷ ರೂಪಾಯಿ ಪೆನ್ಷನ್‌ ಕೂಡಾ ಪಡೆಯಬಹುದು. ಅಚ್ಚರಿಯಾದರೂ ಇದು ನಿಜ.

  ನಿಮಗೀಗ 23 ವರ್ಷ ಎಂದಿಟ್ಟುಕೊಳ್ಳೋಣ. ಈಗಿನ್ನೂ ಕೆಲಸಕ್ಕೆ ಸೇರಿದೀರ. ಮನಸ್ಸು ಮಾಡಿದರೆ ನಿಮಗೆ ತಿಂಗಳಿಗೆ 5 ಸಾವಿರ ರೂಪಾಯಿ ಉಳಿತಾಯ ಮಾಡೋದು ಯಾವ ದೊಡ್ಡ ವಿಷಯವೂ ಅಲ್ಲ. ನೀವು ಮನಸ್ಸು ಮಾಡಬೇಕಷ್ಟೇ. ನೀವು 5 ಐದು ಸಾವಿರ ರೂಪಾಯಿ ತಿಂಗಳಿಗೆ ಉಳಿತಾಯ ಮಾಡಲು ರೆಡಿ ಇದ್ದೀರಿ ಎಂದರೆ ನೀವು ಖಂಡತವಾಗಿಯೂ ಕೋಟ್ಯಧೀಶರಾಗಬಹುದು.

23 ವರ್ಷದ ನೀವು 50 ವರ್ಷಕ್ಕೆ ನಿವೃತ್ತಿಯಾಗಿ ಆರಾಮಾಗಿ ಅಲ್ಲಿ ಇಲ್ಲಿ ಸುತ್ತಾಡುತ್ತಾ ಕಳೆಯಬೇಕು ಎಂದರೆ ಈ 5 ಸಾವಿರ ರೂಪಾಯಿ ಉಳಿತಾಯ ಯೋಜನೆ ನಿಮಗೆ ಸಾಕಷ್ಟು ಉಪಯೋಗವಾಗುತ್ತದೆ. ಅಂದರೆ ನೀವು SIPಯಲ್ಲಿ ಇನ್ವೆಸ್ಟ್‌ ಮಾಡೋದು. SIP ಅಂದ್ರೆ ಬೇರೇನೂ ಅಲ್ಲ. ಸಿಸ್ಟಮೇಟಿಕ್‌ ಇನ್ವೆಸ್ಟ್‌ಮೆಂಟ್‌ ಪ್ಲ್ಯಾನ್‌. ಇಲ್ಲಿ ವಾರ್ಷಿಕ ಕನಿಷ್ಠ 12 ಪರ್ಸೆಂಟ್‌ ಬಡ್ಡಿ ನಿಮಗೆ ಸಿಕ್ಕೇ ಸಿಗುತ್ತದೆ. ಕನಿಷ್ಠ ಆದಾಯದ ಲೆಕ್ಕವನ್ನೇ ತೆಗೆದುಕೊಂಡರೆ, ನೀವು 26 ವರ್ಷಗಳ ಕಾಲ ಪ್ರತಿ ತಿಂಗಳು SIPಯಲ್ಲಿ 5 ಸಾವಿರ ರೂಪಾಯಿ ಉಳಿತಾಯ ಮಾಡುತ್ತಾ ಹೋದರೆ, 26 ವರ್ಷಕ್ಕೆ ನಿಮ್ಮ ಕೈಗೆ, 1 ಕೋಟಿ 7 ಲಕ್ಷದ 55 ಸಾವಿರದ 560 ರೂಪಾಯಿ ಸಿಗುತ್ತದೆ. ಅಂದರೆ ನಿಮಗೆ 50 ವರ್ಷ ಆಗುವಷ್ಟರಲ್ಲಿ ನಿಮ್ಮ ಕೈಗೆ ನಿಮ್ಮ ಕೈಗೆ 1 ಕೋಟಿ ರೂಪಾಯಿ ಸಿಕ್ಕಿರುತ್ತದೆ.

ನೀವು 26 ವರ್ಷದಲ್ಲಿ 15 ಲಕ್ಷ 60 ಸಾವಿರ ರೂಪಾಯಿ ಕಟ್ಟಿರುತ್ತೀರಿ. ಆದ್ರೆ ನಿಮಗೆ ಬಡ್ಡಿಗೆ  ಬಡ್ಡಿ ಸೇರಿ 26 ವರ್ಷದಲ್ಲಿ ಕೋಟಿ ಹಣ ಬರುತ್ತದೆ. ಐವತ್ತು ವರ್ಷದಲ್ಲಿ ನೀವು ನಿವೃತ್ತಿಯಾದರೂ ಬಂದ ಕೋಟಿ ಹಣದಲ್ಲಿ ಮಕ್ಕಳು ಮದುವೆ ಮಾಡಿಸಲೋ, ಮನೆ ಕಟ್ಟಿಸಲೋ 50 ಲಕ್ಷ ಖರ್ಚು ಮಾಡಿದರೂ, ಉಳಿದ 50 ಲಕ್ಷವನ್ನು ಮ್ಯೂಚ್ಯುಯಲ್‌ ಫಂಡ್‌ನಲ್ಲಿ ಇನ್ವೆಸ್ಟ್‌ ಮಾಡಿದರೆ ತಿಂಗಳಿಗೆ 50 ಸಾವಿರ ರೂಪಾಯಿ ಪೆನ್ಷನ್‌ ರೀತಿಯಲ್ಲಿ ಪಡೆದುಕೊಳ್ಳಬಹುದು.

Share Post