Money Tips; 21 ವರ್ಷದಲ್ಲಿ 70 ಲಕ್ಷ ರೂಪಾಯಿ ಗಳಿಸುವ ಯೋಜನೆ ಇದು!
ಬೆಂಗಳೂರು; ಹಣ ಸಂಪಾದನೆ ಮಾಡಿದರೆ ಸಾಲದು, ಅದನ್ನು ಭವಿಷ್ಯಕ್ಕೆ ಕೂಡಿಡಬೇಕು.. ಹಣವನ್ನು ದುಡಿಮೆಗೆ ಬಿಡಬೇಕು.. ನಮಗೆ ವಯಸ್ಸಾಗುತ್ತಾ ಆಗುತ್ತಾ, ಹಣ ನಮ್ಮನ್ನು ಸಾಕುವಂತಾಗಬೇಕು.. ಅಂದರೆ ವಿವಿಧ ಯೋಜನೆಗಳಲ್ಲಿ ಹಣ ತೊಡಗಿಸಿದ್ದರೆ ಅದದರಿಂದ ಬಡ್ಡಿ ಹಣದಲ್ಲಿ ನಾವು ಜೀವನ ಸಾಗಿಸಬಹುದು.. ನಮ್ಮ ಮಕ್ಕಳ ಮದುವೆ ಮಾಡಬಹುದು, ವಿದ್ಯಾಭ್ಯಾಸ ಮಾಡಿಸಬಹುದು.. ಈಗ ಹಣ ಉಳಿತಾಯ ಮಾಡೋದಕ್ಕೆ ಸಾಕಷ್ಟು ಅವಕಾಶಗಳಿವೆ ಕೇಂದ್ರ ಸರ್ಕಾರ, ಬ್ಯಾಂಕ್‌ಗಳು, ಪೋಸ್ಟ್‌ಫೀಸ್‌ಗಳಲ್ಲಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.. ಅದ್ರಲ್ಲಿ ಸುಕನ್ಯ ಸಮೃದ್ಧಿ ಯೋಜನೆ ಕೂಡಾ ಒಂದು.. ಹೆಣ್ಣು ಮಕ್ಕಳಿಗಾಗಿ ಉಳಿತಾಯ ಮಾಡುವಂತಹ ಯೋಜನೆ ಇದು.. ಇದರಲ್ಲಿ ಅತಿಹೆಚ್ಚು ಬಡ್ಡಿ ಸಿಗುತ್ತದೆ.. ಈ ಯೋಜನೆಯಲ್ಲಿ ವರ್ಷಕ್ಕೆ ಕನಿಷ್ಠ 250 ರೂಪಾಯಿಯಿಂದ 1.5 ಲಕ್ಷ ರೂಪಾಯಿಯವರೆಗೂ ಇಲ್ಲಿ ಹೂಡಿಕೆ ಮಾಡಬಹುದು..
ಈ ಯೋಜನೆಯಲ್ಲಿ 15 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಹೆಣ್ಣು ಮಗುವಿನ ವಯಸ್ಸು 21 ವರ್ಷ ಆದ ಮೇಲೆ ಈ ಹಣವನ್ನು ಪಡೆದುಕೊಳ್ಳಬಹುದು.. ಈ ಯೋಜನೆಯಲ್ಲಿ ಹಣ ಹೂಡಿಕೆ ಮಾಡುವ ಮೂಲಕ 70 ಲಕ್ಷ ರೂಪಾಯಿವರೆಗೂ ಪಡೆಯಬಹುದು. ಹಾಗಾದರೆ 70 ಲಕ್ಷ ರೂಪಾಯಿ ಪಡೆಯಬೇಕಾದರೆ ತಿಂಗಳಿಗೆ ಎಷ್ಟು ಹೂಡಿಕೆ ಮಾಡಬೇಕು ಅನ್ನೋದನ್ನು ನೋಡೋಣ.. ನಿಮ್ಮ ಮಗಳು ಹುಟ್ಟಿದ ದಿನದಿಂದ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಪ್ರಾರಂಭಿಸಿ. ಅಂದಿನಿಂದಲೇ ನೀವು ವರ್ಷಕ್ಕೆ 1.5 ಲಕ್ಷ ರೂಪಾಯಿ ಠೇವಣಿ ಇಡುತ್ತೀರಿ ಎಂದಿಟ್ಟುಕೊಳ್ಳೋಣ. ಅಂದ್ರೆ ತಿಂಗಳಿಗೆ 12500 ರೂಪಾಯಿ. ನೀವು ಹೀಗೆ 15 ವರ್ಷಗಳವರೆಗೆ ಈ ರೀತಿ ಹೂಡಿಕೆ ಮಾಡಿದರೆ, ನೀವು ಒಟ್ಟು 22,50,000 ರೂಪಾಯಿ ಹೂಡಿಕೆ ಮಾಡಿರುತ್ತೀರಿ.. ಈ ಯೋಜನೆಗೆ ಸದ್ಯ ಶೇಕಡಾ 8.2ರಷ್ಟು ಬಡ್ಡಿ ಇದೆ. 21 ವರ್ಷಗಳ ನಂತರ 46,77,578 ಬಡ್ಡಿ ಸಿಗುತ್ತದೆ.
ಹೀಗಾಗಿ ನಿಮ್ಮ ಮಗಳಿಗೆ 21 ವರ್ಷವಾದಾಗ 69 ಲಕ್ಷ 27 ಸಾವಿರದ 578 ರೂಪಾಯಿ ಬರುತ್ತದೆ.. 2024ರ ಆಗಸ್ಟ್‌ನಲ್ಲಿ ಈ ಯೋಜನೆಗೆ ಸೇರಿದರೆ 2045 ರ ವೇಳೆಗೆ ನೀವು 70 ಲಕ್ಷ ರೂಪಾಯಿ ಪಡೆಯುತ್ತೀರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವವರು 1961 ರ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಉಳಿಸುವ ಅವಕಾಶವನ್ನು ಸಹ ಪಡೆಯುತ್ತಾರೆ.