CrimeInternational

ನುಡಿದಂತೆ ನಡೆದ ಇಸ್ರೇಲ್‌; 150ಕ್ಕೂ ಹೆಚ್ಚು ಹಮಾಸ್‌ ಉಗ್ರರ ಹತ್ಯೆ

ಇಸ್ರೇಲ್‌ ನುಡಿದಂತೆ ನಡೆದಿದೆ. ಹಮಾಸ್‌ ಅಡಗುದಾಣಗಳ ಮೇಲೆ ಇಸ್ರೇಲ್‌ ಭೂ ಸೇನೆ ದಾಳಿ ಮಾಡಿದೆ. ಹಮಾಸ್‌ ಉಗ್ರರಿದ್ದ ಸುರಂಗದ ಮೇಲೆ ಇಸ್ರೇಲ್‌ ಭೂಸೇನೆ ದಾಳಿ ಮಾಡಿದ್ದು, 150ಕ್ಕೂ ಹೆಚ್ಚು ಹಮಾಸ್‌ ಉಗ್ರರನ್ನು ಹೊಡೆದುರುಳಿಸಿದೆ.

ಹಮಾಸ್​​ ಉಗ್ರರು ಬಳಸುತ್ತಿದ್ದ ಸುರಂಗ ಮಾರ್ಗಗಳನ್ನೇ ಮುಚ್ಚಲು ಇಸ್ರೇಲ್​​ ದೊಡ್ಡ ಪ್ಲಾನ್​​ ಮಾಡಿತ್ತು. ಆದ್ರೆ ಇಸ್ರೇಲ್​​ ನಿನ್ನೆ ನೇರವಾಗಿ ದಾಳಿ ಮಾಡಲಾಗಿದೆ. ಇದರಲ್ಲಿ ಇಸ್ರೇಲ್​​​ ಸೈನಿಕರಿಗೆ ಯಾವುದೇ ತೊಂದರೆ ಆಗಿಲ್ಲ, ಆದರೆ 150ಕ್ಕೂ ಹೆಚ್ಚು ಹಮಾಸ್​​ ಉಗ್ರರು ಸಾವನ್ನಪ್ಪಿದ್ದಾರೆ.

ಇನ್ನು ಇಸ್ರೇಲ್ IDF ಹಮಾಸ್​​ ಸುರಂಗ ನೆಲೆಗಳನ್ನು ನಾಶ ಮಾಡುವ ಪ್ರಯತ್ನ ಸಫಲಗೊಂಡಿದೆ. ಇದರ ಜತೆಗೆ ಹಮಾಸ್​​ ಮೂಲಸೌಕರ್ಯಗಳನ್ನು ನಾಶ ಮಾಡಿದೆ.

Share Post