Economy

Karnataka Budget; ಈ ಬಾರಿಯ ಬಜೆಟ್‌ನಲ್ಲಿ ಹೊಸದೇನಿದೆ..?

ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಸುಮಾರು 3 ಗಂಟೆ 15 ನಿಮಿಷಗಳ ಕಾಲ ರಾಜ್ಯ ಬಜೆಟ್‌ ಮಂಡನೆ ಮಾಡಿದ್ದಾರೆ. ಎಲ್ಲಾ ಕ್ಷೇತ್ರಕ್ಕೂ ಅನುದಾನ ನೀಡಿದ್ದಾರೆ. ಒಂದಷ್ಟು ಹೊಸ ಯೋಜನೆಗಳನ್ನು ಕೂಡಾ ಅವರು ಈ  ಬಜೆಟ್‌ ನಲ್ಲಿ ನೀಡಿದ್ದಾರೆ. ಅವುಗಳ ವಿವರಗಳನ್ನು ಇಲ್ಲಿ ನೀಡಲಾಗಿದೆ.

ಹೊಸ ಯೋಜನೆಗಳು, ಕೊಡುಗೆಗಳು ಏನು..?

=============================

ರಸ್ತೆ ಸಂಪರ್ಕ ಜಾಲ ಅಭಿವೃದ್ಧಿಗೆ ಪ್ರಗತಿಪಥ ಯೋಜನೆ

ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಇ-ಆಫೀಸ್ ಪ್ರಾರಂಭ

35 ಕೋಟಿ ರೂಪಾಯಿ ವೆಚ್ಚದಲ್ಲಿ 100 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆ

ದಾಖಲೆ ರಹಿತ ಜನ ವಸತಿ ಪ್ರದೇಶಗಳ 2 ಲಕ್ಷ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ

ಭಾನುವಾರವೂ ಕೂಡಾ ಆಯ್ದ ಸಬ್​ರಿಜಿಸ್ಟ್ರಾರ್ ಕಚೇರಿಗಳ ಕಾರ್ಯ ನಿರ್ವಹಣೆ

ಕಸ್ತೂರಿ ಕನ್ನಡ ಎಂಬ ಟ್ರಾನ್ಸಲೇಷನ್ ಸಾಫ್ಟ್​ವೇರ್ ಅಭಿವೃದ್ಧಿಗೆ ಕ್ರಮ

ರೈತರಿಗಾಗಿ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ ಮಾಡಲಾಗುವುದು

ರೈತರಿಗಾಗಿ ಕೃಷಿ ಅಭಿವೃದ್ಧಿ ಪ್ರಾಧಿಕಾರ, ಬೀಜ ಬ್ಯಾಂಕ್ ಸ್ಥಾಪನೆಗೆ ಕ್ರಮ

ಸಾಗರ ಮಾಲಾ ಯೋಜನೆಯಡಿ ಕಡಲ ತೀರದ ವ್ಯಾಪಾರಕ್ಕೆ ಆದ್ಯತೆ

ಉತ್ತರ ಕನ್ನಡ ಜಿಲ್ಲೆಯ ಕೇಣಿಯಲ್ಲಿ 30 MTPA ಸರ್ವಋುತು ಬಂದರು

50 ಗ್ರಾ.ಪಂ.ಗಳಲ್ಲಿ ‘ಹೊಂಬೆಳಕು’ ಕಾರ್ಯಕ್ರಮದಡಿ ಸೋಲಾರ್ ದೀಪ ಅಳವಡಿಕೆ

ಉದ್ಯಮಗಳ ಬೇಡಿಕೆಗೆ ಪೂರಕವಾದ Skill Connect Summit ಆಯೋಜನೆ

‘ನಮ್ಮ ಮಿಲೆಟ್‌’ ಎಂಬ ಹೊಸ ಕಾರ್ಯಕ್ರಮ ಆರಂಭ ಮಾಡಲಾಗುವುದು

ಪ್ರಗತಿ ಪಥ, ಕಲ್ಯಾಣ ಪಥ ಯೋಜನೆ ಜಾರಿ

ಕೃಷಿ ಭಾಗ್ಯ ಮರುಜಾರಿ ಮಾಡುವುದಾಗಿ ಘೋಷಣೆ

ಮೇಕೆದಾಟು ಯೋಜನೆಗಾಗಿ ‘ಪ್ರತ್ಯೇಕ ಯೋಜನಾ ವಿಭಾಗ’ ಸ್ಥಾಪನೆ

ಬೆಂಗಳೂರು ಬಿಸಿನೆಸ್ ಕಾರಿಡಾರ್ ಯೋಜನೆ

IIM-B ಸಹಯೋಗದೊಂದಿಗೆ 10 ಜಿಲ್ಲೆಗಳಲ್ಲಿ Incubation ಕೇಂದ್ರಗಳು

ಹಿರಿಯ ನಾಗರಿಕರಿಗೆ ಆಹಾರ ಧಾನ್ಯ ಒದಗಿಸುವ ‘ಅನ್ನ ಸುವಿಧಾ’ ಆಪ್

ಪಟ್ಟಣ ಪಂಚಾಯತ್​ ವ್ಯಾಪ್ತಿಯಲ್ಲಿ 5 ಸಾವಿರ ಯುವಕರಿಗೆ ಡ್ರೋಣ್ ತರಬೇತಿ

ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಆಹಾರ ನೀಡಲು ‘ಕೆಫೆ ಸಂಜೀವಿನಿ’

ಹಳೇ ಮಂಗಳೂರು ಬಂದರಿನಲ್ಲಿ 350 ಮೀ ಉದ್ದದ ಕೋಸ್ಟರ್ ಬರ್ತ್‌

ಮಂಗಳೂರಿನ ಗುರುಪುರು, ನೇತ್ರಾವತಿ ನದಿಗಳಲ್ಲಿ ಜಲಮೆಟ್ರೋ ಸೇವೆ

ಬೆಂಗಳೂರು ಕೆಂಪೇಗೌಡ ವಿಮಾನನಿಲ್ದಾಣದ ಬಳಿ ಸಿಗ್ನೇಚರ್ ಬಿಸಿನೆಸ್ ಪಾರ್ಕ್‌

ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ಗಳನ್ನು ಸ್ಥಾಪಿಸಲು ಕ್ರಮ

ಬಸವಣ್ಣರನ್ನ ‘ಸಾಂಸ್ಕೃತಿಕ ನಾಯಕ’ ಎಂದು ಸರ್ಕಾರದ ಘೋಷಣೆ

Share Post