DistrictsPolitics

ಮಾಜಿ ಶಾಸಕರ ಮನೆಗೆ ಹರಿದು ಬರ್ತಿದೆಯಂತೆ ಅನಾಮಧೇಯ ಹಣ

ತುಮಕೂರು: ಚುನಾವಣೆಯಲ್ಲಿ ಮತದಾರರಿಗೆ ಹಣ ನೀಡಿ ಮತಹಾಕಿಸಿಕೊಳ್ಳಬೇಕು ಎಂಬ ರಾಜಕೀಯ ನಾಯಕರ ಮಾತನ್ನ ನಾವು ಬಹಿರಂಗವಾಗಿಯೇ ಕೇಳಿದ್ದೇವೆ. ಜೊತೆಗೆ ಜನಸೇವಕನಾಗಿ ವಿಶ್ವಾಸ ಗಳಿಸಿದ್ರೆ ಜನರೇ ತಮ್ಮ ಸ್ವಂತ ಹಣ ನೀಡಿ ಗೆಲ್ಲಿಸುತ್ತಾರೆ ಎಂಬುದಕ್ಕೆ ಹಲವು ಸಾಕ್ಷ್ಯಗಳು ನಮ್ಮ ಮುಂದಿವೆ. ಅಂತಹದ್ದೇ ಒಂದು ಅಪರೂಪದ ಸಂಗತಿಗೆ ಕಾರಣವಾಗಿದೆ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರ.

ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ನೆಚ್ಚಿನ ನಾಯಕನಿಗೆ ಚುನಾವಣೆಗೆ ಖರ್ಚಿಗೆಂದು ಕ್ಷೇತ್ರದ ಜನರೇ ಹಣ ಕಳಿಸಲು ಮುಂದಾಗಿದ್ದಾರಂತೆ. ಇಂದಿನ ಯುಗದಲ್ಲಿ ಈ ಅಪರೂಪದ ಸಂಗತಿ ಇಡೀ ರಾಜ್ಯ ರಾಜಕಾರಣದಲ್ಲಿ ಅಚ್ಚರಿಗೆ ಕಾರಣವಾಗಿದೆ. ಪ್ರತಿದಿನ ಸುರೇಶ್ ಬಾಬು ಅವರ ಮನೆಗೆ ತಾಂಬೂಲದೊಂದಿಗೆ ಮಕ್ಕಳ ಕೈಲಿ 1000-500 ರೂ ಹಣವನ್ನ ಮನೆಗೆ ತಲುಪಿಸುತ್ತಿದ್ದಾರಂತೆ. ಕಳೆದ ಒಂದು ವಾರದಿಂದ ಈ ರೀತಿ ಮನೆಗೆ ಹಣ ಹರಿದು ಬರ್ತಿದೆ, ಇದುವರೆಗೂ ಒಂದು ಲಕ್ಷಕ್ಕೂ ಅಧಿಕ ಹಣ ಬಂದಿದೆ ಬಂದಿದೆ ಎಂದು ಮಾಜಿ ಶಾಸಕ ಸುರೇಶ್ ಬಾಬು ಹೇಳಿಕೊಂಡಿದ್ದಾರೆ‌.

ಕ್ಷೇತ್ರದ ಜನರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸುರೇಶ್ ಬಾಬುಗೆ ಕ್ಷೇತ್ರದ ಇದೀಗ ಅಭಿಮಾನದ ಹಣದ ಹೊಳೆಯನ್ನ ಹರಿಸುತ್ತಿದ್ದಾರೆ. ಹಿಂದೆ ಇಂತಹ ಪದ್ದತಿ ರಾಜಕಾರಣದಲ್ಲಿ ರೂಡಿಯಿತ್ತು, ಚುನಾವಣೆಗಳಿಗೆ ಜನರೇ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು.ಹಣಕ್ಕಾಗಿ ಮತ ಮಾರಿಕೊಳ್ಳುತ್ತಿರುವ ಇಂದಿನ ಕಾಲದಲ್ಲಿ ಚಿಕ್ಕನಾಯಕನಹಳ್ಳಿಯ ಜನತೆ ಇಡೀ ರಾಜ್ಯಕ್ಕೆ ಆದರ್ಶವಾಗಿ ನಿಲ್ಲುತ್ತಾರೆ.

ಇದನ್ನ ಕೆಲವರು ಚುನಾವಣೆ ಗಿಮೀಕ್ ಎಂದು ಜರಿದಿದ್ದು ಇತ್ತೀಚೆಗೆ ಸಚಿವ ಮಾಧುಸ್ವಾಮಿ ಸುರೇಶ್ ಬಾಬು ಅವರ ಬಳಿ ಹಣವಿಲ್ಲ ಚುನಾವಣೆಯಲ್ಲಿ ಅವನು ನನಗೆ ಸರಿಸಮಾನ ಅಲ್ಲಾ ಎಂದು ಜರಿದಿದ್ದರು. ಇದರಿಂದ ಕ್ಷೇತ್ರದ ಜನರು ಹಣವನ್ನ ಕಳಿಸುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿವೆ.

ಅದೇನೆ ಇರಲಿ ಮತ ಮಾರಿಕೊಳ್ಳದೆ, ಸ್ವಾಭಿಮಾನದಿಂದ ತಮ್ಮ‌ ನೆಚ್ಚಿನ ನಾಯಕನಿಗೆ ಕ್ಷೇತ್ರದ ಜನರೇ ಹಣ ನೀಡುತ್ತಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.

Share Post