Districts

ಅರಮನೆ ನಗರಿ ಮೈಸೂರಿನಲ್ಲಿ ಒಮಿಕ್ರಾನ್‌ ಸೋಂಕು ದೃಢ

ಮೈಸೂರು: ರಾಜ್ಯದಲ್ಲಿ ಕೊರೋನಾ ರೂಪಾಂತರಿ ಒಮಿಕ್ರಾನ್‌ ಸೋಂಕು ಹೆಚ್ಚಳವಾಗುತ್ತಿದೆ. ಇದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಅಷ್ಟೇ ಅಲ್ಲದೆ ಹಳ್ಳಿಯ ಕಡೆ ಜನರು ಲಸಿಕೆ ಹಾಕಿಸಿಕೊಳ್ಳವುದಕ್ಕೆ ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಲಸಿಕೆಗಾಗಿ ಜನರು ಮುಗಿಬಿದಿದ್ದಾರೆ. ಸದ್ಯ ಆರೋಗ್ಯ ಮಾಹಿತಿ ಪ್ರಕಾರ ರಾಜ್ಯದಲ್ಲಿ ಮತ್ತೊಂದು ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಅರಮನೆ ನಗರಿಯಲ್ಲಿ ಒಂಭತ್ತು ವರ್ಷದ ಮಗುವಿಗೆ ಒಮಿಕ್ರಾನ್‌ ಸೋಂಕು ಪತ್ತೆಯಾಗಿದೆ.
ಈ ಮೂಲಕ ಮೈಸೂರಿನಲ್ಲಿ ಮೊದಲ ಒಮಿಕ್ರಾನ್‌ ಸೋಂಕು ದೃಢಪಟ್ಟಿದೆ. ಹೊರದೇಶದಿಂದ ಆಗಮಿಸಿರುವ ಮಗುವಿಗೆ ಒಮಿಕ್ರಾನ್‌ ಇದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ೨೦ಕ್ಕೆ ಒಮಿಕ್ರಾನ್‌ ಪ್ರಕರಣದ ಸಂಖ್ಯೆ ಏರಿಕೆ ಕಂಡಿದೆ. ದೇಶದಲ್ಲಿ ಒಮಿಕ್ರಾನ್‌ ಸೋಂಕಿತರ ಸಂಖ್ಯೆ ೨೩೮ಕ್ಕೆ ಏರಿಕೆ ಆಗಿದೆ. ಈಗಾಗಲೇ ಶಿವಮೊಗ್ಗ, ಧಾರವಾಡ, ಮಂಗಳೂರು ಜಿಲ್ಲೆಯಲ್ಲಿ ಒಮಿಕ್ರಾನ್‌ ಸೋಂಕು ಕಾಣಿಸಿಕೊಂಡಿದೆ. ಈಗ ಮೈಸೂರಿನಲ್ಲಿ ಕಾಣಿಸಿಕೊಂಡಿದ್ದು, ಜನರು ಭಯಬೀತರಾಗಿದ್ದಾರೆ.

 

Share Post