CrimeDistricts

ಸ್ಕ್ರೂಡ್ರೈವರ್‌ನಿಂದ ಎದೆಗೆ ಚುಚ್ಚಿ ಯುವಕನ ಬರ್ಬರ ಹತ್ಯೆ

ಬೆಳಗಾವಿ; ಬೆಳಗಾವಿ ಜಿಲ್ಲೆಯಲ್ಲಿ ಯುವಕನೊಬ್ಬನ ಬರ್ಬರ ಹತ್ಯೆ ನಡೆದಿದೆ. ಬೆಳಗಾವಿ ತಾಲ್ಲೂಕಿನ ಮಜಗಾಂವ ಗ್ರಾಮದ ಪ್ರತೀಕ್‌ ಲೋಹಾರ್‌ ಎಂಬಾತನನ್ನು ಕೊಲೆ ಮಾಡಲಾಗಿದೆ. ಮಚ್ಚೆ ಬಳಿಯ ಯಳ್ಳೂರ ರಸ್ತೆಯಲ್ಲಿ ದುಷ್ಕರ್ಮಿಗಳ ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗುತ್ತಿದೆ. ಪ್ರತೀಕ್‌ ಅವರು ಬೆಳಗಾವಿಯಲ್ಲಿ ಕೆಲಸ ಮುಗಹಿಸಿ ಮನೆಗೆ ಬರುತ್ತಿದ್ದರು. ಈ ವೇಳೆ ಸ್ನೇಹಿತನೊಬ್ಬನ ಜೊಲತೆ ಜಗಳ ಆಡುತ್ತಿದ್ದರು. ಪ್ರತೀಕ್‌ ಅದನ್ನು ಬಿಡಿಸಲು ಹೋಗಿದ್ದು, ಈ ವೇಳೆ ದುಷ್ಕರ್ಮಿಗಳು ಪ್ರತೀಕ್‌ಗೆ ಸ್ಕ್ರೂಡ್ರೈವರ್‌ನಿಂದ ಎದೆಗೆ ಚುಚ್ಚಿ ಕೊಲೆ ಮಾಡಿದ್ದಾರೆ. ಈ ಹಿಂದೆ ಕೂಡಾ ಹಲವು ಬಾರಿ ಜಗಳಗಳಾಗಿವೆ ಎಂದು ಹೇಳಲಾಗುತ್ತಿದೆ. ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post