ರೈತರಿಗೆ ಕನ್ಯೆ ಕೊಡಲಿ, ಬಾಳೆಹಣ್ಣಿನಲ್ಲಿ ಬರೆದು ದೇವರಿಗೆ ಬೇಡಿದ ಯುವಕ
ವಿಜಯನಗರ; ರೈತರಿಗೆ ಕನ್ಯಾ ಕೊಡಲಿ, ಜನರ ಮನಸ್ಸು ಬದಲಾಗಲಿ ಎಂದು ಯುವಕನೊಬ್ಬ ಬಾಳೆಹಣ್ಣಿನಲ್ಲಿ ಬರೆದು ರಥಕ್ಕೆ ಎಸೆದಿದ್ದಾನೆ.
ರಥೋತ್ಸವದಲ್ಲಿ ಪಾಲ್ಗೊಳ್ಳುವ ಜನರು ತಮ್ಮ ಬೇಡಿಕೆಗಳನ್ನ ಈಡೇರಿಸುವಂತೆ ಮನದಲ್ಲೆ ನೆನೆದು ಬಾಳೆಹಣ್ಣು, ದವನವನ್ನ ರಥದ ತುತ್ತತುದಿಯಲ್ಲಿರುವ ಕಳಶದ ಮೇಲೆ ಎಸೆಯುವುದು ವಾಡಿಕೆ. ಆದರೆ ಇತ್ತೀಚಿನ ದಿನಗಳಲ್ಲಿ ಬಹಿರಂಗವಾಗಿಯೇ ಬಾಳೆ ಹಣ್ಣಿನ ಮೇಲೆ ತಮ್ಮಿಷ್ಟಾರ್ಥಗಳನ್ನ ಬಾಳೆ ಹಣ್ಣಿನ ಮೇಲೆ ಬರೆದು ರಥಕ್ಕೆ ಎಸೆಯುವುದು ಹೆಚ್ಚಾಗ್ತಿದೆ.
ಜಿಲ್ಲೆಯ ಹಗರಿಬೊಮ್ಮನ ಹಳ್ಳಿ ತಾಲೂಕಿನ ಚಿಮ್ಮನಹಳ್ಳಿ ದುರ್ಗಾಂಬಿಕೆ ರಥೋತ್ಸವದಲ್ಲಿ ಯುವಕನೊಬ್ಬ ರೈತರಿಗೆ ಕನ್ಯಾ ಕೊಡಲಿ ಎಂದು ಬಾಳೆಹಣ್ಣಿನ ಮೇಲೆ ಬರೆದು ಎಸೆದಿದ್ದಾನೆ. ದೇಶದ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾದ ರೈತರಿಗೆ ಹೆಣ್ಣು ಕೊಡದೇ ಇರುವುದು. ಕೇವಲ ನೌಕರರಿಗೆ ಮಾತ್ರ ಹೆಣ್ಣನ್ನು ಕೊಡುತ್ತಿದ್ದು, ಹೆಣ್ಣೆತ್ತವರ ಮನಸ್ಸು ಬದಲಾಗಲಿ ರೈತರಿಗೆ ಕನ್ಯಾ ಕೊಡಲಿ ಎಂದು ತಾಯಿ ದುರ್ಗಾ ಮಾತೆಗೆ ಯುವಕ ಬರಹದ ಬಾಳೆಹಣ್ಣನ್ನು ರೈತರ ಪರವಾಗಿ ಸಮರ್ಪಣೆ ಮಾಡಿದ್ದಾನೆ.
ಅಷ್ಟೇ ಅಲ್ಲದೆ ಇತ್ತೀಚೆಗೆ ತುಮಕೂರು ಜಿಲ್ಲೆಯಲ್ಲಿ ನಡೆದ ರಥೋತ್ಸವದ ಸಂದರ್ಭದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಯಾಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಎಸೆದಿದ್ದು ಸುದ್ದಿಯಾಗಿತ್ತು.