ಪತಿಯಿಂದಲೇ ಪತ್ನಿಯ ಬರ್ಬರ ಹತ್ಯೆ; ಕಾರಣ ಏನು ಗೊತ್ತಾ..?
ಬೆಂಗಳೂರು; ಬೆಂಗಳೂರಿನಲ್ಲಿ ಪಾಪಿ ಪತಿಯೊಬ್ಬ ತನ್ನ ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ದುರ್ಘಟನೆ ನಡೆದಿದೆ.
ಲೈದಿಯಾ ಎಂಬಾಕೆಯೇ ಪತಿಯಿಂದ ಕೊಲೆಯಾದ ಮಹಿಳೆ. ಮೊರೀಸ್ ಎಂಬಾತ ಹದಿನೆಂಟು ವರ್ಷಗಳ ಹಿಂದೆ ಲೈದಿಯಾಳನ್ನು ಮದುವೆಯಾಗಿದ್ದಾರೆ. ಇವರಿಗೆ ಮೂವರು ಗಂಡು ಮಕ್ಕಳಿದ್ದು, ಮೂವರೂ ಖಾಸಗಿ ಶಾಲೆಯಲ್ಲಿ ಓದುತ್ತಿದ್ದಾರೆ.
ಇಬ್ಬರು ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ಹೇಳಲಾಗುತ್ತಿದೆ. ಇಂದೂ ಕೂಡಾ ಜಗಳವಾಗಿದ್ದು, ಕುಪಿತಗೊಂಡಿದ್ದ ಗಂಡ ಮೊರೀಸ್ ಡಂಬಲ್ಸ್ ತೆಗೆದುಕೊಂಡು ತಲೆಗೆ ಹೊಡೆದಿದ್ದಾನೆ. ಇದ್ರಿಂದ ಲೈದಿಯಾಳ ತಲೆ ಒಡೆದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.