ಸಾವರ್ಕರ್ ಅನ್ಯಮತ ದ್ವೇಷಿ; ಸಿದ್ದರಾಮಯ್ಯ ಹೇಳಿಕೆ ಸಮರ್ಥಿಸಿದ ಯತೀಂದ್ರ
ಮೈಸೂರು; ಸಾವರ್ಕರ್ ಅನ್ಯಮತ ದ್ವೇಷಿಯಾಗಿದ್ದು, ಮುಸ್ಲಿಮರ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎಂದು ಸಿದ್ದರಾಮಯ್ಯ ಅವರು ಹೇಳಿದ್ದು ಸರಿ ಇದೆ ಎಂದು ಅವರ ಪುತ್ರ ಹಾಗೂ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಹೇಳಿದ್ದಾರೆ. ಟಿ.ನರಸೀಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಂದ ನಂತರ ಕೋಮು ದ್ವೇಷ ಹೆಚ್ಚಾಗುತ್ತಿದೆ ಎಂದು ಕಿಡಿ ಕಾರಿದರು.
ಮುಸ್ಲಿಮರನ್ನು ಸಾವರ್ಕರ್ ಭಾರತೀಯರೆಂದು ಒಪ್ಪಿಕೊಂಡಿರಲಿಲ್ಲ. ಹಿಂದೂ ರಾಷ್ಟ್ರವನ್ನು ಒಪ್ಪಿಕೊಂಡು ಇರಬೇಕು ಎಮದು ಹೇಳಿದ್ದರು. ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರನ್ನು ಎರಡುನೇ ದರ್ಜೆ ಪ್ರಜೆಗಳಾಗಿರಬೇಕೆಂದು ಸಾವರ್ಕರ್ ಹೇಳಿದ್ದರು. ಹೀಗಾಗಿ ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕುವುದು ಪ್ರಚೋದನಾಕಾರಿಯಾಗುತ್ತದೆ ಎಂದು ಶಾಸಕ ಯತೀಂದ್ರ ಹೇಳಿದ್ದಾರೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹತ್ಯೆಗಳು ಹೆಚ್ಚಾಗುತ್ತಿವೆ. ಬಿಜೆಪಿ ಸರ್ಕಾರದ ವೈಫಲ್ಯವನ್ನು ಮುಚ್ಚಿ ಹಾಕಲು ಅನಗತ್ಯವಾಗಿ ಗಲಭೆ ಸೃಷ್ಟಿ ಮಾಡಲಾಗುತ್ತಿದೆ ಎಂದು ಯತೀಂದ್ರ ಆರೋಪ ಮಾಡಿದರು.