Districts

ದಸರಾ ಗಜಪಡೆಗೆ ತೂಕ ಪರೀಕ್ಷೆ; ಅಭಿಮನ್ಯುವೇ ಟಾಪ್‌

ಮೈಸೂರು; ಮೊನ್ನೆಯಷ್ಟೇ ಮೈಸೂರಿಗೆ ಆಗಮಿಸಿರುವ ದಸರಾ ಆನೆಗಳಿಗೆ ಪೌಷ್ಠಿಕ ಆಹಾರ ನೀಡಿ ಸಾಕಲಾಗುತ್ತಿದೆ. ಇಂದು ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಇದರಲ್ಲಿ ಕ್ಯಾಪ್ಟನ್‌ ಅಭಿಮನ್ಯು ಎಲ್ಲಾ ಆನೆಗಳಿಗಿಂತ ಹೆಚ್ಚು ತೂಕವಿದ್ದಾನೆ. ಅಭಿಮನ್ಯು 5160 ಕೆಜಿ ತೂಕ ಇದ್ದಾನೆ ಎಂದು ತಿಳಿದುಬಂದಿದೆ.

 

ದೇವರಾಜ ಮೊಹಲ್ಲಾದ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ದಸರಾ ಆನೆಗಳಿಗೆ ತೂಕ ಪರೀಕ್ಷೆ ಮಾಡಲಾಯಿತು. ಅಂದಹಾಗೆ, ದಸರಾ ಇನ್ನೂ ಒಂದು ತಿಂಗಳಿಗೂ ಹೆಚ್ಚು ಕಾಲ ಇದೆ. ಅಲ್ಲಿಯವರೆಗೆ ಆನೆಗಳ ತೂಕದ ಆಧಾರದ ಮೇಲೆ ಅವುಗಳಿಗೆ ಆಹಾರ ಹಾಗೂ ತರಬೇತಿಗಳನ್ನು ನೀಡಲಾಗುತ್ತದೆ. ಈ ಕಾರಣದಿಂದಾಗಿ ತೂಕ ಹಾಕಲಾಗಿದೆ. ಕ್ಯಾಪ್ಟನ್‌ ಅಭಿಮನ್ಯು ತನ್ನ ಎತ್ತರ ತಕ್ಕ ತೂಕ ಹೊಂದಿದ್ದಾನೆ. ಆರೋಗ್ಯವಾಗಿದ್ದಾನೆ ಎಂದು ಪಶು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

ದಸರಾ ಗಜಪಡೆಯ ತೂಕದ ವಿವರ;

ಅಭಿಮನ್ಯು – 5,160 ಕೆಜಿ

ವಿಜಯ – 2,830 ಕೆಜಿ
ಭೀಮ – 4,370 ಕೆಜಿ
ವರಲಕ್ಷ್ಮಿ – 3,020 ಕೆಜಿ
ಮಹೇಂದ್ರ – 4,530 ಕೆಜಿ
ಧನಂಜಯ – 4,940 ಕೆಜಿ
ಕಂಜನ್ – 4,240 ಕೆಜಿ
ಗೋಪಿ – 5,080 ಕೆಜಿ

Share Post