50 ವರ್ಷದೊಳಗಿನವರಲ್ಲಿ ಕ್ಯಾನರ್ ಕಾಯಿಲೆ ಹೆಚ್ಚು; ಸಾವನ್ನಪ್ಪುವವರ ಸಂಖ್ಯೆಯೂ ಹೆಚ್ಚಳ..!
ಬೆಂಗಳೂರು; ಭಾರತದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅದರಲ್ಲೂ ಐವತ್ತು ವರ್ಷದೊಳಗಿನವರಲ್ಲಿ ಕ್ಯಾನ್ಸರ್ ರೋಗ ಹೆಚ್ಚು ಕಾಣಿಸಿಕೊಳ್ಳುತ್ತಿದೆ ಎಂಬುದು ಅಧ್ಯಯನದಿಂದ ಬಯಲಾಗಿದೆ. ಹೊಸ ಕ್ಯಾನ್ಸರ್ ಪ್ರಕರಣಗಳಲ್ಲಿ 50 ವರ್ಷದೊಳಗಿನವರಲ್ಲಿ ಶೇ.79ರಷ್ಟು ಹೆಚ್ಚಾಗಿದೆ. ಇನ್ನು ಕ್ಯಾನ್ಸರ್‌ನಿಂದ ಸಾವನ್ನಪ್ಪುವವರ ಸಂಖ್ಯೆಯೂ ಶೇಕಡಾ 28ರಷ್ಟು ಜಾಸ್ತಿಯಾಗಿದೆ.
ಮೆಡಿಕಲ್ ಜರ್ನಲ್ (ಆಂಕೊಲಾಜಿ)ನಲ್ಲಿ ಈ ಬಗ್ಗೆ ಅಧ್ಯಯನ ವರದಿ ಪ್ರಕಟವಾಗಿದೆ. 1990ರಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆ 1.82 ಮಿಲಿಯನ್ ಇತ್ತು. ಆದ್ರೆ 2019ರ ವೇಳೆಗೆ 3.26 ಮಿಲಿಯನ್‌ಗೆ ಏರಿಕೆಯಾಗಿದೆ ಎಂದು ತಿಳಿದುಬಂದಿದೆ. ಉಪ್ಪು ಹೆಚ್ಚಾಗಿ ಸೇವಿಸುವುದು, ಕೆಂಪು ಮಾಂಸ ತಿನ್ನುವವರಲ್ಲಿ ಕ್ಯಾನ್ಸರ್ ಪ್ರಕರಣ ಹೆಚ್ಚು ಎಂದು ಹೇಳಲಾಗುತ್ತಿದೆ. ಇನ್ನು ಮದ್ಯಪಾನ ಹಾಗೂ ಧೂಮಪಾನ, ತಂಬಾಕು ಸೇವನೆ ಮಾಡುವ ಐವತ್ತು ವರ್ಷದೊಳಗಿನವರಲ್ಲಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ವರದಿಗಳು ತಿಳಿಸುತ್ತವೆ.