Districts

ಘಟಪ್ರಭಾ ನದಿಯಲ್ಲಿ ಬತ್ತುತ್ತಿದೆ ನೀರು; ಲಕ್ಷಾಂತರ ಮೀನುಗಳ ಸಾವು!

ಬೆಳಗಾವಿ; ಘಟಪ್ರಭಾ ನದಿಯಲ್ಲಿ ನೀರು ಬತ್ತುತ್ತಿದೆ. ಮುಂಗಾರು ಮಳೆ ವಿಳಂಬವಾಗುತ್ತಿರುವುದರಿಂದ ನದಿಯಲ್ಲಿ ನೀರು ಹರಿಯುತ್ತಿಲ್ಲ. ಇದರಿಂದ ಅವಾಂತರ ಸೃಷ್ಟಿಯಾಗುತ್ತಿದೆ. ನದಿಯಲ್ಲಿ ಗಣನೀಯ ಮಟ್ಟದಲ್ಲಿ ನೀರು ಕಡಿಮೆಯಾಗಿರುವುದರಿಂದ ಲಕ್ಷಾಂತರ ಮೀನುಗಳು ನೀರಿಲ್ಲದೆ ಸಾವನ್ನಪ್ಪಿವೆ.

ಜೂನ್‌ ಮೊದಲ ವಾರದಲ್ಲೇ ಮಳೆ ಬರಬೇಕಿತ್ತು. ಆದ್ರೆ ಜೂನ್‌ ತುಂಬಿ ಜುಲೈ ಆಗಮನವಾಗುತ್ತಿದೆ. ಆದ್ರೂ ಮಳೆ ಬರುತ್ತಿಲ್ಲ. ಇದರಿಂದಾಗಿ ಸಮಸ್ಯೆ ಎದುರಾಗಿದೆ. ಘಟಪ್ರಭಾ ನದಿಯಲ್ಲಿ ನೀರು ಕಡಿಮೆಯಾಗಿದ್ದರಿಂದ ಇದನ್ನೇ ನಂಬಿಕೊಂಡಿರುವ ಜನ ಪರದಾಡುವಂತಾಗಿದೆ. ಇದರ ಜೊತೆಗೆ ನದಿಯಲ್ಲಿ ವಾಸವಿದ್ದ ಮೀನುಗಳು ಕೂಡಾ ಸಾವನ್ನಪ್ಪುವ ಪರಿಸ್ಥಿತಿಗೆ ಬಂದಿದೆ. ಕಳೆದ ಕೆಲ ದಿನಗಳಿಂದ ನೀರಿಲ್ಲದೆ ಮೀನುಗಳು ಸಾವನ್ನಪ್ಪುತ್ತಿವೆ. ನದಿಯುದ್ಧಕ್ಕೂ ಲಕ್ಷಾಂತರ ಮೀನುಗಳ ಸತ್ತುಬಿದ್ದಿವೆ.

ಬಳೋಬಾಳ, ಬೀರನಗಟ್ಟಿ ಗ್ರಾಮಗಳ ಬಳಿ ಕೂಡಾ ಅಪಾರ ಪ್ರಮಾಣದ ಮೀನುಗಳು ಸತ್ತಿವೆ. ಇದರಿಂದಾಗಿ ಸುತ್ತಮುತ್ತಲ ಪ್ರದೇಶಗಳಿವೆ ದುರ್ವಾಸನೆ ಬರುತ್ತಿದೆ. ಸುತ್ತಲಿನ ಗ್ರಾಮಸ್ಥರಲ್ಲಿ ರೋಗ ಹರಡುವ ಭಿತಿ ಎದುರಾಗಿದೆ.

Share Post