Districts

ನಾಡಬಂದೂಕು ತಯಾರಿಸಿ ಮಾರಾಟ; ತುಮಕೂರು ಕಾರ್ಪೆಂಟರ್‌ ಅರೆಸ್ಟ್‌

ತುಮಕೂರು: ಸಿಂಗಲ್‌ ಬ್ಯಾರಲ್‌ನ ನಾಡಬಂದೂಕು ತಯಾರು ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ತುಮಕೂರಿನ ಕ್ಯಾತ್ಸಂದ್ರ ಪೊಲೀಸರು ಬಂಧಿಸಿದ್ದಾರೆ. ಕಾರ್ಪೆಂಟರ್‌ ಕೆಲಸ ಮಾಡುತ್ತಿದ್ದ ದುರ್ಗದಹಳ್ಳಿಯ ಕೃಷ್ಣಪ್ಪ ಎಂಬಾತನೇ ಬಂಧಿತ ವ್ಯಕ್ತಿ. ಕೃಷ್ಣಪ್ಪ ಇದುವರೆಗೆ ಆರು ಬಂದೂಕುಗಳನ್ನು ತಯಾರು ಮಾಡಿ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ.

ಕಾರ್ಪೆಂಟರ್‌ ಕೆಲಸ ಮಾಡಿಕೊಂಡಿದ್ದ ಕೃಷ್ಣಪ್ಪಗೆ ನಾಡಬಂದೂಕು ತಯಾರಿಸುವ ಬಗ್ಗೆ ಗೊತ್ತಿತ್ತು. ಹೊಲಗಳಲ್ಲಿ ಪ್ರಾಣಿ, ಹಕ್ಕಿಗಳನ್ನು ಹೊಡೆಯಲು ಯಾರೋ ಬಂದು ಕೃಷ್ಣಪ್ಪನನ್ನು ಬಂದೂಕು ತಯಾರಿಸಿಕೊಡುವಂತೆ ಕೇಳಿದ್ದಾರೆ. ಹೀಗಾಗಿ ಕೃಷ್ಣಪ್ಪ ನಾಡಬಂದೂಕು ತಯಾರಿಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಇದುವರೆಗೆ ಕೃಷ್ಣಪ್ಪ ಆರು ಮಂದಿಗೆ ಬಂದೂಕು ಮಾರಾಟ ಮಾಡಿದ್ದರು ಎಂದು ಗೊತ್ತಾಗಿದೆ.

ಈ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಕ್ಯಾತ್ಸಂದ್ರ ಪೊಲೀಸರು ದಾಳಿ ನಡೆಸಿದ್ದಾರೆ. ದುರ್ಗದಹಳ್ಳಿಯ ಕೃಷ್ಣಪ್ಪ ನಿವಾಸದಲ್ಲಿ ಹುಡುಕಾಟ ನಡೆಸಿದಾಗ ಒಂದು ನಾಡಬಂದೂಕು ಪತ್ತೆಯಾಗಿದೆ. ಜೊತೆಗೆ ಬಂದೂಕು ತಯಾರಿಗೆ ಬೇಕಾದ ಸಾಮಗ್ರಿಗಳು ಸಿಕ್ಕಿವೆ.

ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಸಿಕ್ಕಿ ಹಿನ್ನೆಲೆಯಲ್ಲಿ ಕೃಷ್ಣಪ್ಪನನ್ನು ಬಂಧಿಸಲಾಗಿದೆ. ಇನ್ನು ಕೃಷ್ಣಪ್ಪನ ಬಳಿ ಬಂದೂಕು ಖರೀದಿಸಿದ್ದ ಆರು ಮಂದಿಯಲ್ಲಿ ಮೂವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದಾರೆ. ಇತರ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Share Post