CrimeDistricts

ಟ್ರಾನ್ಸ್‌ಫಾರ್ಮರ್‌ನಲ್ಲಿ ಮದ್ಯ ಸಾಗಾಟ; ಗೋವಾ ಮಾಲು ಸಿಕ್ಕಿಬಿದ್ದಿದು ಹೇಗೆ..?

ಬೆಳಗಾವಿ; ವಿದ್ಯುತ್‌ ಟ್ರಾನ್ಸ್‌ ಫಾರ್ಮರ್‌ ಮಾದರಿ ಸೃಷ್ಟಿ ಮಾಡಿ ಅದರೊಳಗೆ ಗೋವಾದ ಮದ್ಯವನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದವನನ್ನು ಬಂಧಿಸಲಾಗಿದೆ. ಹಿರೇಬಾಗೇವಾಡಿಯಲ್ಲಿ ದಾಳಿ ನಡಸಿದ ಅಬಕಾರಿ ಅಧಿಕಾರಿಗಳು ಮಾಲು ಸಮೇತ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಮಹಾರಾಷ್ಟ್ರ ಮೂಲದ ಶ್ರೀಧರ್ ಎಂದು ಗುರುತಿಸಲಾಗಿದೆ. ಐಷರ್ ವಾಹನದಲ್ಲಿ ಟ್ರಾನ್ಸ್‌ಫಾರ್ಮರ್‌ನಂತೆ ಕಾಣುವ ಎರಡು ಪೆಟ್ಟಿಗೆಯನ್ನು ಸಿದ್ಧಪಡಿಸಿ, ಅದರಲ್ಲಿ ಗೋವಾ ಮದ್ಯವನ್ನು ತುಂಬಿಸಿಕೊಂಡು ಬಂದಿದ್ದ.  ಈ ಬಗ್ಗೆ ಮಾಹಿತಿ ಅರಿತ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

 

Share Post