ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ ಗ್ರೌಂಡ್ನಲ್ಲಿ ಓಡಿಸಿದ ದೈಹಿಕ ಶಿಕ್ಷಣ ಶಿಕ್ಷಕ!
ಬೀದರ್; ವಿದ್ಯಾರ್ಥಿಗಳ ಮೇಲೆ ದೈಹಿಕ ಶಿಕ್ಷಕನೊಬ್ಬ ಕ್ರೌರ್ಯ ಮೆರೆದಿದ್ದಾನೆ. ಅಪ್ರಾಪ್ತ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿರುವ ದೈಹಿಕ ಶಿಕ್ಷಕ ಅವರನ್ನು ಮೈದಾನದಲ್ಲಿ ಓಡಿಸಿ ಅಮಾನವೀಯತೆ ಮರೆದಿದ್ದಾರೆ. ಬೀದರ್ ಜಿಲ್ಲೆ ಹುಮ್ನಾಬಾದ್ ಪಟ್ಟಣದ ನಗರೇಶ್ವರಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಈ ಘಟನೆ ನಡೆದಿದೆ.
ರಮೇಶ್ ಎಂಬ ದೈಹಿಕ ಶಿಕ್ಷಕನೇ ಈ ಅಮಾನವೀಯ ಕೃತ್ಯ ಎಸಗಿರುವಾತ. ಮಕ್ಕಳು ಹೇಳಿದ್ದನ್ನು ಕೇಳದಿದ್ದಕ್ಕೆ ಶಿಕ್ಷೆ ಎಂಬಂತೆ ವಿದ್ಯಾರ್ಥಿಗಳ ಪ್ಯಾಂಟ್ ಬಿಚ್ಚಿಸಿ ಓಡಿಸಿದ್ದಾನೆ. ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸೋದು, ಹಿಂಸೆ ನೀಡೋದು ಮಾಡುತ್ತಿದ್ದನಂತೆ. ಈ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.