CrimeDistricts

ಹುಡುಗಿಯನ್ನು ಪ್ರೀತಿಸಿದ್ದು ಅಣ್ಣ, ಆದ್ರೆ ಹುಡುಗಿ ಕಡೆಯವರು ತಮ್ಮನನ್ನು ಕೊಂದರು!

ಕಲಬುರಗಿ; ಯುವಕನೊಬ್ಬ ಯುವತಿಯನ್ನು ಪ್ರೀತಿ ಮಾಡುತ್ತಿದ್ದ.. ಆ ವಿಚಾರ ಹುಡುಗಿ ಮನೆಯವರಿಗೆ ಗೊತ್ತಾಗಿತ್ತು.. ಹೀಗಾಗಿ ಎರಡೂ ಮನೆಯವರ ನಡುವೆ ಜಗಳವೂ ನಡೆದಿತ್ತು.. ಅನಂತರ ಅದೇನಾಯ್ತೋ ಏನೋ ಹುಡುಗಿ ಮನೆಯವರು ಹುಡುಗನ ಮನೆ ಬಂದಿದ್ದಾರೆ.. ಈ ವೇಳೆಯೂ ಜಗಳವಾಗಿದೆ.. ಆದ್ರೆ ಹುಡುಗ ಅಲ್ಲಿರಲಿಲ್ಲ.. ಹೀಗಾಗಿ ಹುಡುಗಿ ಮನೆಯವರು ಹುಡುಗನ ಸಹೋದರನ ಮೇಲೆ ಚಾಕುವಿನಿಂದ ಇರಿದಿದ್ದಾರೆ.. ತೀವ್ರ ಗಾಯಗೊಂಡ ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ..
ಕಲಬುರಗಿ ನಗರದ ಹೊರವಲಯದ ನಾಗನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.. 19 ವರ್ಷದ ಯುವಕ ಸುಮಿತ್‌ ಮುಲ್ಲಾಬಾದ್‌ ಎಂಬಾತನೇ ಕೊಲೆಯಾದವನು.. ಸುಮಿತ್‌ ಮುಂಬೈನಲ್ಲಿ ಪದವಿ ಓದುತ್ತಿದ್ದ ವಾರದ ಹಿಂದಷ್ಟೇ ಆತ ಕಲಬುರಗಿಯ ಮನೆಗೆ ಬಂದಿದ್ದ.. ಸುಮಿತ್‌ ಸಹೋದರ ಸಚಿನ್‌ ಕಲಬುರಗಿಯ ನಾಗನಹಳ್ಳಿಯಲ್ಲೇ ವಾಸವಿದ್ದು, ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಎನ್ನಲಾಗಿದೆ.. ಈ ವಿಚಾರ ಯುವತಿ ಕಡೆಯವರಿಗೆ ಗೊತ್ತಾಗಿ ದೊಡ್ಡ ಜಗಳ ಮಾಡಿದ್ದರು.. ಹಲವಾರು ಸಲ ಪಂಚಾಯ್ತಿ ಕೂಡಾ ಮಾಡಲಾಗಿತ್ತು ಎನ್ನಲಾಗಿದೆ..
ಮತ್ತೆ ಅದೇನಾಯ್ತೋ ಏನೋ ಯುವತಿಯ ಸಹೋದರ ಹಾಗೂ ಆತನ ಕೆಲ ಸ್ನೇಹಿತರು ಏಕಾಏಕಿ ಯುವಕನ ಮನೆಗೆ ನುಗ್ಗಿದ್ದಾರೆ.. ಈ ವೇಳೆ ಮನೆಯಲ್ಲಿ ಸಚಿನ್‌ ಸಹೋದರ ಸುಮಿತ್‌ ಹಾಗೂ ಸಚಿನ್‌ ತಾಯಿ ಮಾತ್ರ ಮನೆಯಲ್ಲಿದ್ದರು.. ಪ್ರೀತಿ ವಿಚಾರದಲ್ಲೇ ಮನೆಯವರ ಜೊತೆ ಜಗಳ ತೆಗೆದಿದ್ದಾರೆ.. ಸಚಿನ್‌ ಎಲ್ಲಿ ಎಂದು ಕೇಳಿದ್ದಾರೆ.. ಆದ್ರೆ ಸಚಿನ್‌ ಮನೆಯಲ್ಲಿರಲಿಲ್ಲ.. ಹೀಗಾಗಿ ಯುವತಿಯ ಕಡೆಯವರು ಸಚಿನ್‌ ಸಹೋದರ ಸುಮಿತ್‌ಗೆ ಚಾಕುವಿನಿಂದ ಇರಿದಿದ್ದಾರೆ.. ಇದರಿಂದ ಆತನಿಗೆ ತೀವ್ರ ರಕ್ತಸ್ರಾವವಾಗಿದೆ.. ಹೀಗಾಗಿ ಆತನ ತಾಯಿ ಕೂಡಲೇ ಆತನನ್ನು ಕಲಬುರಗಿ ನಗರದ ಜಿಮ್ಸ್‌ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.. ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಸುಮಿತ್‌ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ..
ಕೊಲೆ ಮಾಡಿದ ನಂತರ ಆರೋಪಿಗಳು ನಾಪತ್ತೆಯಾಗಿದ್ದಾರೆ.. ವಿಶ್ವವಿದ್ಯಾಲಯ ಠಾಣೆಯಲ್ಲಿ ಕೇಸ್‌ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ..

Share Post