CrimeDistricts

ಸೂಸೈಡ್‌ ಬಾಂಬರ್‌ ಆಗಿದ್ದ ಆರೋಪಿ ಶಾರಿಕ್‌; ಈ ಹಿಂದೆ ಎರಡು ಬಾರಿ ಜೈಲಿಗೆ

ಮಂಗಳೂರು; ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಆರೋಪಿಗೆ ಉಗ್ರ ಚಟುವಟಿಕೆ ಹಿನ್ನೆಲೆ ಇದೆ ಅನ್ನೋದು ಬಹಿರಂಗವಾಗಿದೆ. ಶಿವಮೊಗ್ಗದ ತೀರ್ಥಹಳ್ಳಿಯ ನಿವಾಸಿಯಾಗಿದ್ದ ಶಾರಿಕ್‌, ಜನನಿಬಿಡ ಪ್ರದೇಶದಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡು ಹಲವರ ಪ್ರಾಣಹಾನಿಗೆ ಕಾರಣನಾಗಲು ಮುಂದಾಗಿದ್ದ ಎಂದು ಹೇಳಲಾಗುತ್ತಿದೆ.

ಅಂದಹಾಗೆ ಆರೋಪಿ ಶಾರಿಕ್‌ ಈ ಹಿಂದೆ ಮಂಗಳೂರಿನಲ್ಲಿ ಐಸಿಸ್‌ ಉಗ್ರ ಸಂಘಟನೆ ಪರ ಗೋಡೆ ಬರಹ ಬರೆದಿದ್ದ. ಐಸಿಸ್‌ ಜಿಂದಾಬಾದ್‌ ಎಂದು ಬರೆದು ಪೊಲೀಸರ ಅತಿಥಿಯಾಗಿದ್ದ. ಇದಾದ ಮೇಲೆ ಶಿವಮೊಗ್ಗದಲ್ಲಿ ನಡೆದ ಗಲಭೆ ಪ್ರಕರಣದಲ್ಲೂ ಆತ ಪೊಲೀಸರಿಗೆ ಬೇಕಾಗಿದ್ದ. ಎನ್‌ಐಎ ಅಧಿಕಾರಿಗಳು ಶಾರಿಕ್‌ಗಾಗಿ ಹುಡುಕಾಟ ನಡೆಸುತ್ತಿದ್ದರು. ಪೊಲೀಸರಿಗೆ ಸಿಕ್ಕಿಬೀಳುವ ಬದಲು ಸೂಸೈಡ್‌ ಬಾಂಬರ್‌ ಆಗಲು ನಿರ್ಧರಿಸಿದ್ದ ಆತ, ಮಂಗಳೂರಿನಲ್ಲಿ ಬಾಂಬ್‌ ಬ್ಲಾಸ್ಟ್‌ ಮಾಡಲು ಪ್ಲ್ಯಾನ್‌ ಮಾಡಿಕೊಂಡು ಬಂದಿದ್ದ ಎನ್ನಲಾಗಿದೆ.

ಮಂಗಳೂರಿನ ದೇರಳಕಟ್ಟೆಯ ಪಿ ಎ ಕಾಲೇಜಿನಲ್ಲಿ ಎಂಜಿನಿಯರಿಂಗ್ ಮಾಡಿದ್ದ ಶಾರಿಕ್‌ಗೆ ಮಂಗಳೂರಿನ ಸಂಪೂರ್ಣ ಪರಿಚಯಚವಿತ್ತು. ಎಲ್ಲಿ ಹೆಚ್ಚು ಜನ ಸೇರುತ್ತಾರೆ ಅನ್ನೋದು ಆತನಿಗೆ ಗೊತ್ತಿತ್ತು. ಜನನಿಬಿಡ ಪಂಪ್‌ವೆಲ್‌ನಲ್ಲಿ ಆತ ಬ್ಲಾಸ್ಟ್‌ ಮಾಡಲು ನಿರ್ಧಾರ ಮಾಡಿದ್ದ. ಅದಕ್ಕೂ ಮೊದಲು ಆರೋಪಿ ನಾಗುರಿಯಲ್ಲಿರುವ ವೈನ್‌ಶಾಪ್‌ನಲ್ಲಿ ಮದ್ಯ ಖರೀದಿ ಮಾಡಿದ್ದ. ಈ ವೇಳೆ ಮತ್ತೊಬ್ಬ ವ್ಯಕ್ತಿ ಕೂಡಾ ಶಾರಿಕ್‌ ಜೊತೆಗಿದ್ದ ಅನ್ನೋದು ಗೊತ್ತಾಗಿದೆ. ಶಾರಿಕ್‌ ತನ್ನ ಮೈಮೇಲೆ ಮೂರು ಟಿ ಶರ್ಟ್‌ ಧರಿಸಿದ್ದ.

ಶಾರಿಕ್‌ ಅಂದುಕೊಂಡಂತೆ ನಡೆದಿಲ್ಲ. ಸ್ಥಳ ತಲುಪುವ ಮೊದಲೇ ಟೈಮ್‌ ಬಾಂಬ್‌ ಸ್ಫೋಟಗೊಂಡಿದೆ. ಸದ್ಯ ಶಾರಿಕ್‌ ತೀವ್ರಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆತನ ಪೋಷಕರು ಮಂಗಳೂರಿಗೆ ಆಗಮಿಸಿದ್ದು, ಆತನನನ್ನು ಗುರುತು ಹಿಡಿದಿದ್ದಾರೆ.

Share Post