DistrictsPolitics

ಲಿಂಗಾಯತರನ್ನು ಸಿಎಂ ಮಾಡುವ ಏಕೈಕ ಪಕ್ಷ ಬಿಜೆಪಿ; ನಳಿನ್‌ಕುಮಾರ್‌ ಕಟೀಲ್‌

ಮಂಗಳೂರು; ಲಿಂಗಾಯತರಿಗೆ ಮುಖ್ಯಮಂತ್ರಿ ಮಾಡುವ ಏಕೈಕ ಪಕ್ಷ ಬಿಜೆಪಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಬಿಜೆಪಿ ಮೊದಲಿನಿಂದಲೂ ಲೀಮಗಾಯತರಿಗೆ ಹೆಚ್ಚಿನ ಆಧ್ಯತೆ ನೀಡಿಕೊಂಡು ಬಂದಿದೆ. ಬಿಜೆಪಿ ಪಕ್ಷವೇ ಮೂವರು ಲಿಂಗಾಯತರನ್ನು ಸಿಎಂ ಮಾಡಿದೆ ಎಂದು ಹೇಳಿದರು.

ಮುಂದಿನ ದಿನಗಳಲ್ಲಿ ಕೂಡಾ ಲಿಂಗಾಯತರಿಗೆ ಸಿಎಂ ಸ್ಥಾನ ಸಿಗಲಿದೆ. ಶೆಟ್ಟರ್‌, ಸವದಿ ಸೇರಿ ಹಲವು ನಾಯಕರು ಸುಮ್ಮನೆ ಪಕ್ಷ ಬಿಟ್ಟು ಹೋಗಿದ್ದಾರೆ. ಶೆಟ್ಟರ್‌ ಅವರ ಬೇಡಿಕೆ ಈಡೇರಿಸುವುದಾಗಿ ಹೇಳಿದ್ದರೂ ಅವರು ಪಕ್ಷ ಬಿಟ್ಟು ಹೋಗಿದ್ದಾರೆ. ಅವರಿಗೆ ಕಾಂಗ್ರೆಸ್‌ನಲ್ಲಿ ಪರಿಸ್ಥಿತಿ ಏನು ಅನ್ನೋದು ಅರಿವಿಗೆ ಬರುತ್ತ ಎಂದು ಹೇಳಿದ್ದಾರೆ.

Share Post