ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ತೆಲುಗು ಪವರ್ ಸ್ಟಾರ್
ಸುಬ್ರಹ್ಮಣ್ಯ: ತೆಲುಗು ಪವರ್ ಸ್ಟಾರ್ ಪವನ್ ಕಲ್ಯಾಣ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದರು. ಜ್ಯೋತಿಷಿಯೊಬ್ಬರು ಹೇಳಿದಂತೆ ಕುಕ್ಕೆಗೆ ಭೇಟಿ ನೀಡಿದ್ದ ಅವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಕುಕ್ಕೆ ದೇವಸ್ಥಾನದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದ ಪವನ್ ಕಲ್ಯಾಣ್ ಅವರು, ಆದಿ ಸುಬ್ರಹ್ಮಣ್ಯದ ನಾಗ ಹುತ್ತಕ್ಕೆ ವಸ್ತ್ರ ಸಮರ್ಪಿಸಿ ಪ್ರಾರ್ಥನೆ ಸಲ್ಲಿಸಿದರು. ನಂತರ ಕುಕ್ಕೆ ಕ್ಷೇತ್ರದಲ್ಲೇ ನೀಡುವ ಬೆಳಗಿನ ಉಪಾಹಾರವನ್ನು ಅವರು ಸ್ವೀಕರಿಸಿದರು. ಇದೇ ವೇಳೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯಿಂದ ನಟನನ್ನು ಸ್ವಾಗತಿಸಿ, ಸನ್ಮಾನಿಸಲಾಯಿತು.



