ಇಂದಿನಿಂದ ಸುತ್ತೂರು ಜಾತ್ರೆ; ದನಗಳ ಪರಿಷೆ ಇಲ್ಲ
ಮೈಸೂರು; ಇಂದಿನಿಂದ ಸುತ್ತೂರು ಜಾತ್ರಾ ಮಹೋತ್ಸವ ಆರಂಭವಾಗಿದ್ದು, ಜನವರಿ 23ರ ವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವ ನಡೆಯಲಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ಸುತ್ತೂರು ಶ್ರೀ ಕ್ಷೇತ್ರ ಜಾತ್ರಾ ಮಹೋತ್ಸವ ಆರಂಭಕ್ಕೆ ಮುನ್ನಾ ಶ್ರೀ ಶಿವರಾತ್ರೇಶ್ವರರ ಕರ್ತೃ ಗದ್ದಿಗೆಗೆ ವಿಶೇಷ ಪೂಜೆ ನಡೆಯಲಿದೆ. ಕರ್ತೃ ಗದ್ದುಗೆ ಪೂಜೆ ಜೊತೆಗೆ ದಾಸೋಹ ಭವನದಲ್ಲೂ ಪೂಜೆ ನಡೆಯುತ್ತದೆ .
ಸುತ್ತೂರು ಮಠಾಧಿಪತಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಪೂಜೆ ನೆರವೇರಿಸಲಿದ್ದಾರೆ. ಸುತ್ತೂರು ಜಾತ್ರಾ ಮಹೋತ್ಸವದಲ್ಲಿ 10 ಲಕ್ಷ ಜನರು ಭಾಗಿಯಾಗುವ ಸಾಧ್ಯತೆ ಇದೆ. ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನ್ನದಾಸೋಹ ನೀಡಲು ಸಕಲ ಸಿದ್ಧತೆ ನಡೆದಿದೆ.
ಈ ಬಾರಿಯ ಸುತ್ತೂರು ಜಾತ್ರಾ ಮಹೋತ್ಸವದಲ್ಲಿ ದನಗಳ ಜಾತ್ರೆ ರದ್ದು ಮಾಡಲಾಗಿದೆ. ಕಳೆದ 53ವರ್ಷಗಳಿಂದಲೂ ದನಗಳ ಪರಿಷೆ ನಡೆದುಕೊಂಡ ಬಂದಿದ್ದು, ಈ ಬಾರಿ ಚರ್ಮಗಂಟು ರೋಗ ಹಿನ್ನೆಲೆ ರದ್ದು ಮಾಡಲಾಗಿದೆ.