Districts

Hatti Gold Mines : ಕಲ್ಲು ಕುಸಿತ ; ಓರ್ವ ಕಾರ್ಮಿಕ ಸಾವು

ರಾಯಚೂರು : ಹಟ್ಟಿ ಚಿನ್ನದ ಗಣಿಯಲ್ಲಿ ಮೇಲ್ಭಾಗದ ಕಲ್ಲು ಕುಸಿತದಿಂದಾಗಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮತ್ತೊಬ್ಬ ಕಾರ್ಮಿಕನ ಸ್ಥಿತಿ ಗಂಭೀರವಾಗಿದೆ. ಈ ಅಚಾತುರ್ಯಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಕಾರ್ಮಿಕರು ದೂರಿದ್ದಾರೆ.

ದೇವದುರ್ಗ ತಾಲ್ಲೂಕಿನ ಊಟಿ ಚಿನ್ನದ ಗಣಿಯಲ್ಲಿ ಈ ಘಟನೆ ನಡೆದಿದೆ. ಮೃತ ಕಾರ್ಮಿಕ ಯಲ್ಲಪ್ಪ ಎಂದು ಹೇಳಲಾಗ್ತಿದೆ. ಇನ್ನು ಗಂಭೀರವಾಗಿ ಗಾಯಗೊಂಡ ಕಾರ್ಮಿಕನ ಹೆಸರು ಹನುಮಂತ ಎಂದು ಹೇಳಲಾಗಿದೆ.

ಕಾರ್ಮಿಕರು ಹಟ್ಟಿ ಚಿನ್ನದ ಗಣಿಯ ವ್ಯಪ್ತಿಗೆ ಬರುವ ಊಟಿ ಗಣಿಯಲ್ಲಿ ಸುಮಾರು 800 ಅಡಿ ಆಳದ ಅಂಡರ್‌ಗ್ರೌಂಡ್‌ನಲ್ಲಿ ಕೆಲಸ ನಿರ್ವಹಿಸುತ್ತಿರುತ್ತಾರೆ. 800 ಅಡಿ ಆಳದಲ್ಲಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ಮೇಲ್ಭಾಗದಿಂದ ಕಲ್ಲು ಕುಸಿದು ಬಿದ್ದಿದೆ ಇದರಿಂದ ಯಲ್ಲಪ್ಪ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Share Post