DistrictsPolitics

Special Manifesto; ಹೆಣ್ಣು ಸಿಗದ ವರನಿಗೆ ಮದುವೆ ಗ್ಯಾರೆಂಟಿ; ಗಮನಸೆಳೆದ ಪಕ್ಷೇತರನ ಪ್ರಣಾಳಿಕೆ..!

ಬೆಳಗಾವಿ; ರಾಜ್ಯದಲ್ಲಿರುವ ಪ್ರಮುಖ ಮೂರೂ ಪಕ್ಷಗಳೂ ಹಲವು ಉಚಿತ ಭರವಸೆಗಳನ್ನೂ ಘೋಷಣೆ ಮಾಡಿವೆ. ಆದ್ರೆ ಅವೆಲ್ಲಕ್ಕಿಂತ ಪಕ್ಷೇತರ ಅಭ್ಯರ್ಥಿನಯೊಬ್ಬನ ಪ್ರಣಾಳಿಕೆ ಸಾಕಷ್ಟು ಸುದ್ದಿಯಾಗುತ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಪ್ರಣಾಳಿಕೆ ಸಾಕಷ್ಟು ವೈರಲ್‌ ಆಗುತ್ತಿದೆ. ಯಾಕಂದ್ರೆ, ಪಕ್ಷೇತರ ಅಭ್ಯರ್ಥಿಗಳಿಬ್ಬರು, ತನ್ನನ್ನು ಗೆಲ್ಲಿಸಿದರೆ ಹೆಣ್ಣು ಸಿಗದ ವರನಿಗೆ ಮದುವೆ ಮಾಡಿಸಿಕೊಡುತ್ತೇನೆ ಎಂದು ಗ್ಯಾರೆಂಟಿ ಕೊಟ್ಟಿದ್ದಾರೆ.

ಬೆಳಗಾವಿ ಜಿಲ್ಲೆ ಅರಭಾವಿ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಗುರುಪುತ್ರ ಕೆಂಪಣ್ಣ ಕುಳ್ಳೂರ ಹಾಗೂ ಗೋಕಾಕ್‌ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಪುಂಡಲೀಕ ಕುಳ್ಳೂರ ಅವರು ಇಂತಹದ್ದೊಂದು ಭರವಸೆ ನೀಡಿದ್ದಾರೆ. ಈ ಬಗ್ಗೆ ಕರಪತ್ರಗಳನ್ನು ಮುದ್ರಿಸಲಾಗಿದ್ದು, ಅದರಲ್ಲಿ ವಯಸ್ಸಿಗೆ ಬಂದ ವಧು-ವರರಿಗೆ ಮದುವೆ ಭಾಗ್ಯ ಘೋಷಣೆ ಮಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಅದರಲ್ಲೂ ಕೃಷಿ ಕೆಲಸ ಮಾಡುವ ಯುವಕರಿಗೆ ಹೆಣ್ಣು ಸಿಗುತ್ತಿಲ್ಲ. ಈ ಬಗ್ಗೆ ಆಗಾಗ ಸುದ್ದಿಯಾಗುತ್ತಿರುತ್ತದೆ. ಜೆಡಿಎಸ್‌ ಕೂಡಾ ರೈತ ವರನನ್ನು ಮದುವೆಯಾಗುವ ಹೆಣ್ಣಿಗೆ ಎರಡು ಲಕ್ಷ ರೂಪಾಯಿ ನೀಡೋದಾಗಿ ಹೇಳಿದೆ. ಈ ನಡುವೆ ಈ ಪಕ್ಷೇತರರಿಬ್ಬರೂ ಹೆಣ್ಣು ಹುಡುಕಿ ಮದುವೆ ಮಾಡಿಸೋದಾಗಿ ಆಶ್ವಾಸನೆ ನೀಡುತ್ತಿದ್ದಾರೆ.

Share Post