Districts

ಸೃಷ್ಟಿಯ ವೈಚಿತ್ರ್ಯ; 20 ಕವಲೊಡೆದ ತೆಂಗಿನ ಮರ

ತುಮಕೂರು: ತೆಂಗಿನ ಮರದಲ್ಲಿ ಕೊಂಬೆಗಳಿರೊದುಂಟೇ….? ಇದು ಸಾಧ್ಯ ಎನ್ನುತ್ತಿದೆ ಈ ತೆಂಗಿನ ಮರ. ತುಮಕೂರಿನಲ್ಲಿ ಒಂದು ತೆಂಗಿನ ಮರದಲ್ಲಿ 20ಕ್ಕೂ ಹೆಚ್ಚು ಕವಲೊಡೆದು ಜನರ ಅಚ್ಚರಿಗೆ ಕಾರಣವಾಗಿದೆ.

ತೆಂಗಿನಮರ ಅಕೇಸಿಯಾ ಸಸ್ಯ ಕುಟುಂಬಕ್ಕೆ ಸೇರಿದೆ. ಈ ಜಾತಿಯ ಮರಗಳು ಒಂದೇ ಕಾಂಡವನ್ನ ಹೊಂದಿದ್ದು ಕೊಂಬೆಗಳಿರುವುದಿಲ್ಲ. ಟೊಂಗೆ ಬದಲಿಗೆ ವೃತ್ತಕಾರದಲ್ಲಿ ಮೊನಾಚಾದ ಹಸಿರು ಎಲೆಗಳನ್ನ ಹೊಂದಿರುತ್ತದೆ. ಆದರೆ ಇಲ್ಲೊಂದು ತೆಂಗಿನ ಮರ ದ ತುದಿಯಲ್ಲಿ ಕೊಂಬೆಗಳು ಮೂಡಿ ಹುಬ್ಬೇರುವಂತೆ ಮಾಡಿದೆ.

ತುಮಕೂರು ಜಿಲ್ಲೆಯ ತುರುವೆಕೆರೆ ತಾಲ್ಲೂಕು ಮಲ್ಲದೇವರಹಳ್ಳಿ ಗ್ರಾಮದ ರಂಗಪ್ಪ ಎಂಬುವರ ಜಮೀನಿನಲ್ಲಿ ಈ ವಿಶಿಷ್ಟ ವಾದ ಮರ ಬೆಳೆದಿದೆ. 30 ಅಡಿಗಿಂತಲೂ ಹೆಚ್ಚು ಎತ್ತರ ಬೆಳೆದಿರುವ ಈ ತೆಂಗಿನ ಮರದಲ್ಲಿ 20ಕ್ಕೂ ಹೆಚ್ಚು ಕೊಂಬೆಗಳು ಮೂಡಿದ್ದು ಕೊಂಬೆಗಳಲ್ಲಿ ಸಹ ಕಾಯಿಗಳು ಬಿಡುತ್ತಿರುವುದು ಸ್ಥಳೀಯರ ಅಚ್ಚರಿಗೆ ಕಾರಣವಾಗಿದೆ.

ಇಂತಹ ವಿಶಿಷ್ಟ ತೆಂಗಿನ ಮರವನ್ನ ರಂಗಪ್ಪ ಅವರು ಹಲವು ವರ್ಷಗಳಿಂದಲೂ ಪೂಜೆ ಮಾಡಿಕೊಂಡು ಬಂದಿದ್ದಾರೆ. ತೋಟದ ಮಾಲೀಕ ರಂಗಪ್ಪ ಅವರೇ ಹೇಳುವಂತೆ ಈ ವಿಚಿತ್ರವಾದ ತೆಂಗಿನ ಮರ‌ ಕಲ್ಪವೃಕ್ಷ ದೈವ ಸಮಾನ ದೇವರ ಅವತಾರವೇ ಇರಬಹುದು ಎಂದು ಇದನ್ನ ಹಲವು ವರ್ಷಗಳಿಂದ ಪೂಜೆ ಮಾಡಿಕೊಂಡು ಬಂದಿದ್ದೇವೆ. ಇದರಿಂದ ಕುಟುಂಬಕ್ಕೆ ತುಂಬಾನೇ ಒಳ್ಳೆಯದು ಆಗಿದೆ. ಅಷ್ಟೇ ಅಲ್ಲದೆ, ಗ್ರಾಮದ ಹಲವರು ಬಂದು ಪೂಜೆ ಮಾಡಿಕೊಂಡು ಹೋಗ್ತಾರೆ. ಈ ತೆಂಗಿನ ಮರಕ್ಕೆ ಪೂಜೆ ಮಾಡಿಕೊಂಡು ಅರಕೆ ಕಟ್ಟಿಕೊಂಡ್ರೆ ಒಳ್ಳೆಯದು ಆಗ್ತಿದೆ ಎಂದಿದ್ದಾರೆ‌.

ಇನ್ನು ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಜಯರಾಂ ಕೂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆಶ್ಚರ್ಯ ಕೂಡ ವ್ಯಕ್ತಪಡಿಸಿದ್ದಾರೆ. ಇದೊಂದು ಪ್ರಕೃತಿಯ ವಿಸ್ಮಯ. ಈ ತರಹದ ತೆಂಗಿನ ಮರವನ್ನ ಎಲ್ಲೂ ನೋಡಿರಲಿಲ್ಲ. ಕೇಳಿಯೂ ಇರಲಿಲ್ಲ. ಇಂತಹ ಮರ ನೋಡಿ ನನಗೂ ವಿಶೇಷ ಹಾಗೂ ಆಶ್ಚರ್ಯ ಅನ್ನಿಸುತ್ತಿದೆ. ಹೇಗೆ ಬೆಳೆದಿದೆ ಅನ್ನೋದೆ ವಿಸ್ಮಯ. ಈ ರೀತಿ ತೆಂಗಿನ ಮರ ಬೆಳೆಯೋದಕ್ಕೆ ಹೇಗೆ ಸಾಧ್ಯ ಎಂಬ ಬಗ್ಗೆ ಸಂಬಂಧಪಟ್ಟವರ ಬಳಿ ಚರ್ಚೆ ಮಾಡ್ತೇನೆ.‌ ಈ ಮರಕ್ಕೆ ಹಲವು ಮಂದಿ ಪೂಜೆ ಮಾಡ್ತಿದ್ದಾರೆ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ತುಂಬಾನೇ ಒಳ್ಳೆಯದು ಆಗಿದೆ ಹೇಳ್ತಿದ್ದಾರೆ.

ಅತ್ತಿಮರ ಹೂ ಬಿಡುತ್ತದೆಯೇ, ತೆಂಗಿನ ಮರದಲ್ಲಿ ಟೊಂಗೆ ಬರುತ್ತದೆಯೇ ಎಂಬ ಹಾಡುಮಾತಿಗೆ ಇಂದು ಪ್ರಕೃತಿಯಲ್ಲಾಗುತ್ತಿರುವ ಹಲವಾರು ಬದಲಾವಣೆಗಳಿಂದ ಇಂದಿನ‌ಯುಗದಲ್ಲಿ ಏನು ಬೇಕಾದ್ರೂ ಆಗಬಹುದು ಎಂಬುದಕ್ಕೆ ಇದು ತಾಜಾ ಉದಾಹರಣೆಯಂತಿದೆ. ಎರಡು ತಲೆಯ ಪ್ರಾಣಿಗಳು, ಅಧಿಕ ಕಾಲು ಹೊಂದಿರುವ ಪ್ರಾಣಿಗಳು, ಪ್ರಾಣಿಗಳ ಹೊಟ್ಟೆಯಲ್ಲಿ ಮನುಷ್ಯ ರೂಪದ ಮರಿಗಳ ಜನಿಸುವುದು ಸಾಮಾನ್ಯವಾಗಿದೆ. ಇದೀಗ ಮರಗಳಲ್ಲೂ ಬದಲಾವಣೆಗಳು ಶುರುವಾಗಿರುವುದು ಅಚ್ಚರಿಗೆ ಕಾರಣವಾಗಿದೆ.

Share Post