ಮಗನನ್ನು ಕೊಂದಿದ್ದ ಅಳಿಯ!; ಖಿನ್ನತೆಗೆ ಜಾರಿದ್ದ ತಾಯಿ ಆತ್ಮಹತ್ಯೆ!
ಮೈಸೂರು; ಜೂನ್ 9ರಂದು ಮೈಸೂರಿನ ಕುವೆಂಪು ನಗರದಲ್ಲಿ ಗಂಡ-ಹೆಂಡತಿ ನಡುವೆ ಜಗಳ ನಡೆದಿತ್ತು.. ಈ ವಿಚಾರ ತಿಳಿದ ಹೆಂಡತಿಯ ತಮ್ಮ ಜಗಳ ಬಿಡಿಸಲು ಬಂದಿದ್ದ.. ಈ ವೇಳೆ ಮಾತಿಗೆ ಮಾತು ಬೆಳೆದು ಸ್ವಂತ ಬಾವನೇ ಬಾಮೈದನನ್ನು ಕೊಲೆ ಮಾಡಿದ್ದ.. ಈ ಘಟನೆಯಿಂದ ಮನನೊಂದಿದ್ದ ಕೊಲೆಯಾದವನ ತಾಯಿ ತೀವ್ರ ಖಿನ್ನತೆಗೆ ಒಳಗಾಗಿದ್ದರು.. ಆ ಮಹಿಳೆ ಈಗ ನೇಣಿಗೆ ಶರಣಾಗಿದ್ದಾಳೆ..
ಪುತ್ರನ ಅಗಲಿಕೆಯ ನಾವು ತಾಳಲಾರದೆ ಕೂರ್ಗಳ್ಳಿಯ ಮನೆಯಲ್ಲಿ ಭಾಗ್ಯಮ್ಮ (46) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಜೂನ್ 9ರಂದು ಭಾಗ್ಯಮ್ಮ ಅವರ ಅಳಿಯ ರವಿಚಂದ್ರನ್, ಪುತ್ರ ಅಭಿಷೇಕ್ನನ್ನು ಕೊಲೆ ಮಾಡಿದ್ದ. ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು.. ಅಂದಿನಿಂದ ಭಾಗ್ಯಮ್ಮ ಮಗನ ನೆನಪಲ್ಲೇ ಕೊರಗುತ್ತಿದ್ದರು.. ಖಿನ್ನತೆಗೆ ಜಾರಿದ್ದ ಅವರು ಮಗನನ್ನು ಮರೆಯಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ..