National

ಪಂಜಾಬ್‌ ಸಿಎಂಗೆ ಮತ್ತೊಂದು ಶಾಕ್‌; ರಾತ್ರೋರಾತ್ರಿ ಭೂಪಿಂದರ್‌ ಸಿಂಗ್‌ ಅರೆಸ್ಟ್‌

ಪಂಜಾಬ್: ಪಂಜಾಬ್‌ ಚುನಾವಣೆ ವೇಳೆಯಲ್ಲೇ ಕಾಂಗ್ರೆಸ್‌ ಸಿಎಂ ಚರಣ್‌ಜೀತ್‌ ಚನ್ನಿ ಅವರಿಗೆ ಆಘಾತಗಳು ಎದುರಾಗುತ್ತಿವೆ. ಇತ್ತೀಚೆಗಷ್ಟೇ ಚರಣ್‌ಜೀತ್‌ ಅವರ ಸೋದರಳಿಯ ಭೂಪಿಂದರ್‌ ಸಿಂಗ್‌ಗೆ ಸೇರಿದ ಆಸ್ತಿಗಳ ಮೇಲೆ ಇಡಿ ದಾಳಿ ನಡೆದಿತ್ತು. ಈ ಬೆನ್ನಲ್ಲೇ ಭೂಪಿಂದರ್‌ ಸಿಂಗ್‌ ಅವರನ್ನು ಬಂಧಿಸಲಾಗಿದೆ. ರಾತ್ರಿರೋತ್ರಿ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಭೂಪಿಂದರ್‌ ಸಿಂಗ್‌ರನ್ನು ಬಂಧಿಸಿದ್ದಾರೆ.

ಭೂಪಿಂದರ್‌ ಸಿಂಗ್‌ ವಿರುದ್ಧ ಅಕ್ರಮ ಮರಳು ಗಣಿಗಾರಿಕೆ ಆರೋಪ ಇತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದ ಜಾರಿ ನಿರ್ದೇಶನಾಲಯದ ಅಧಿಕಾರಿಗಳು, ಭುಪಿಂದರ್‌ ಸಿಂಗ್‌ ಮನೆಯಲ್ಲಿ ಹತ್ತು ಕೋಟಿ ರೂಪಾಯಿ ನಗದು ವಶಪಡಿಸಿಕೊಂಡಿದ್ದರು. ಇದೀಗ ಅವರನ್ನು ಬಂಧಿಸಲಾಗಿದೆ. ಇಂದು ಭೂಪಿಂದರ್‌ ಸಿಂಗ್‌ರನ್ನು ಸಿಬಿಐ ಕೋರ್ಟ್‌ಗೆ ಹಾಜರುಪಡಿಸಲಾಗುತ್ತದೆ.

 

Share Post