Districts

ಶಾಲೆಯಲ್ಲೇ ಗುಂಡು-ತುಂಡು ಪಾರ್ಟಿ

ರಾಯಚೂರು: ಶಾಲೆ ಎಂದರೆ ಸಾಕು ದೇವರ ಗುಡಿ ಇದ್ದ ಹಾಗೆ. ಎಲ್ಲಾ ಶಾಲೆ ಮುಂದೆ ಕೈ ಮುಗಿದು ಒಳಗೆ ಬಾ ಎಂದು ಹಾಕಿರುತ್ತಾರೆ. ಆದರೆ ಇಲ್ಲೊಂದು ಶಾಲೆಯಲ್ಲಿ ಪುಂಡರು ಶಾಲೆ ಗೇಟ್‌ ಬೀಗ ಒಡೆದು ಗುಂಡು- ತುಂಡು ಪಾರ್ಟಿ ಮಾಡಿದ್ದಾರೆ.
ಹೌದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ರಬ್ಬಣಕಲ್‌ ಕ್ಯಾಂಪ್‌ನ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೀಗ ಒಡೆದು ಎಣ್ಣೆ ಪಾರ್ಟಿ ಮಾಡಿ, ಶಾಲೆಯಲ್ಲಿರುವ ದಾಖಲಾತಿಗಳನ್ನು ಚೆಲ್ಲಾಪಿಲ್ಲಿಯಾಗಿ ಬೀಸಾಡಿದ್ದಾರೆ. ನಂತರ ಅಡುಗೆ ಕೋಣೆಗೆ ನುಗ್ಗಿ ಅಲ್ಲಿದ್ದ ಮೊಟ್ಟೆ , ಹಾಲಿಪುಡಿ, ಅಕ್ಕಿ, ಸಕ್ಕರೆ ಸೇರಿದಂತೆ ಎಲ್ಲಾ ವಸ್ತುಗಳು ಕಳ್ಳತನ ಮಾಡಿದ್ದಾರೆ. ಈ ಸಂಬಂಧ ಮಾನ್ವಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೊರೋನಾ ಹಾವಳಿಯಿಂದ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಲಾಗಿತ್ತು. ಹೀಗಾಗಿ ಎಲ್ಲೆಂದರಲ್ಲಿ ಹೊಸ ವರ್ಷ ಆಚರಣೆಗೆ ಬ್ರೇಕ್‌ ಹಾಕಲಾಗಿತ್ತು. ಆದ್ದರಿಂದ  ಕೆಲ ಪುಂಡರು ಶಾಲೆಗಳಿಗೆ ನುಗ್ಗಿ ಪಾರ್ಟಿ ಮಾಡಿದ್ದಾರೆ.

Share Post