Districts

ಸಿದ್ದು ವಿರುದ್ಧ ಗೋಬ್ಯಾಕ್‌ ಪೋಸ್ಟರ್‌ ಅಭಿಯಾನ; ಮಡಿಕೇರಿಯಲ್ಲಿ ಕಪ್ಪು ಬಾವುಟ ಪ್ರದರ್ಶನ

ಮಡಿಕೇರಿ; ಸಾವರ್ಕರ್‌ ಪೋಸ್ಟರ್‌ ವಿಚಾರವಾಗಿ ಮಾತನಾಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಜೋರಾಗುತ್ತಿದೆ. ಕೊಡಗಿನ ತಿತಿಮತಿಗೆ ಆಗಮಿಸಿದ್ದ ಸಿದ್ದರಾಮಯ್ಯಗೆ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಮಾಡಿದ್ದಾರೆ. ಸಿದ್ದು ಗೋಬ್ಯಾಕ್‌ ಎಂಬ ಪೋಸ್ಟರ್‌ ಹಿಡಿದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಟಿಪ್ಪು ಸುಲ್ತಾನ್‌ ಶಿಷ್ಯ ಎಂದು ಟೀಕೆ ಮಾಡಿರುವ ಬಿಜೆಪಿ ಯುವ ಕಾರ್ಯಕರ್ತರು, ಸಿದ್ದರಾಮಯ್ಯ ವಾಪಸ್‌ ಹೋಗಬೇಕೆಂದು ಘೋಷಣೆ ಕೂಗಿದ್ದಾರೆ. ಜೊತೆಗೆ ಕಪ್ಪು ಬಾವುಟ ಕೂಡಾ ಪ್ರದರ್ಶನ ಮಾಡಿದ್ದಾರೆ. ನೂರಾರು ಯುವಕರು ಸೇರಿದ್ದರಿಂದ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಪೊಲೀಸರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.

Share Post