DistrictsNational

ಛತ್ತಿಸ್‌ಗಢದಲ್ಲಿ 1 ಕೋಟಿ ಮೌಲ್ಯದ ಡ್ರಗ್ಸ್‌ ವಶ

ರಾಯ್‌ಪುರ; ಛತ್ತಿಸ್‌ಗಢದ ರಾಯ್‌ಪುರ ಪೊಲೀಸು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ೧ ಕೋಟಿ ರೂಪಾಯಿ ಮೌಲ್ಯದ ಡ್ರಗ್ಸ್‌ ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಆರು ಆರೋಪಿಗಳನ್ನು ಬಂಧಿಸಿದ್ದಾರೆ.

 ರಾಯ್‌ಪುರ ಎಸ್‌ಎಸ್‌ಪಿ ಪ್ರಶಾಂತ್ ಅಗರ್‌ವಾಲ್, ಎಎಸ್‌ಪಿ ಅಭಿಷೇಕ್ ಮತ್ತು ಡಿಸಿ ಪಟೇಲ್ ನೇತೃತ್ವದ ತಂಡದಿಂದ ಈ ದಾಳಿ ನಡೆಸಲಾಗಿದೆ.

ರಾಯ್‌ಪುರದ ಆಜಾದ್ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯ ಮುಕುತ್ ನಗರದಲ್ಲಿ ಇಬ್ಬರು ಯುವಕರು ಮಾದಕ ವಸ್ತುಗಳನ್ನು ಮಾರಲು ಯತ್ನಿಸುತ್ತಿದ್ದರು.  ಮಾಹಿತಿ ಅರಿತ ಪೊಲೀಸರು ಅವರನ್ನು ಬಂಧಿಸಿದರು.   ಕಿಯಾಜುದ್ದೀನ್ ಮತ್ತು ಜೆ ಭಾಸ್ಕರ್ ಬಂಧಿತ ಆರೋಪಿಗಳು. ಅವರಿಂದ 1.99 ಲಕ್ಷ ರೂಪಾಯಿ ಮೌಲ್ಯದ 20 ಅಲ್ಪ್ರಜೋಲಮ್ ಮತ್ತು 140 ಸ್ಪಾಸ್ಮೋ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನಂತರ ಅವರು ನೀಡಿದ ಮಾಹಿತಿ ಆಧಾರದ ಮೇಲೆ ಇನ್ನೂ ನಾಲ್ವರನ್ನು ಬಂಧಿಸಿ ಅಪಾರ ಪ್ರಮಾಣದ ಡ್ರಗ್ಸ್‌ ವಶಕ್ಕೆ ಪಡೆಯಲಾಯಿತು.

Share Post