BengaluruPolitics

ಬ್ಲ್ಯಾಕ್‌ ಮೇಲರ್‌ ಕೈಗೆ ಕಾಂಗ್ರೆಸ್‌ ಸಿಕ್ಕಿ ಹಾಳಾಗಿದೆ; ರಮೇಶ್‌ ಜಾರಕಿಹೊಳಿ

ಬೆಂಗಳೂರು; ಬ್ಲ್ಯಾಕ್‌ ಮೇಲರ್‌ ಕೈಗೆ ಕಾಂಗ್ರೆಸ್‌ ಸಿಕ್ಕಿ ಹಾಳಾಗಿದೆ ಎಂದು ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕೆಂಡ ಕಾರಿದ್ದಾರೆ. ಈ ಬಗ್ಗೆ ಮಾತನಾಡಿರುವ ರಮೇಶ್‌ ಜಾರಕಿಹೊಳಿ, ನನ್ನ ಹತ್ರ ನೂರು ಎವಿಡೆನ್ಸ್‌ ಇವೆ, ಆದ್ರೆ ನಾನು ಬಹಿರಂಗ ಮಾಡಲ್ಲ ಎಂದು ಹೇಳಿದ್ದಾರೆ.

ನನ್ನ ಹತ್ರ ಸಾಕ್ಷ್ಯವಿದ್ದರೂ ಹೊರಬಿಡುತ್ತಿಲ್ಲ. ಯಾಕಂದ್ರೆ ಡಿ.ಕೆ.ಶಿವಕುಮಾರ್‌ ಪತ್ನಿ ನನ್ನ ತಂಗಿ ಎಂದು ರಮೇಶ್‌ ಜಾರಕಿಹೊಳಿ ಹೇಳಿದ್ದಾರೆ. ಡಿ.ಕೆ.ಶಿವಕುಮಾರ್‌ ಕೈಗೆ ರಾಜ್ಯ ಸಿಕ್ತು ಅಂದ್ರೆ ಏನಾಗುತ್ತೆ ಎಂದು ಪ್ರಶ್ನೆ ಮಾಡಿರುವ ರಮೇಶ್‌ ಜಾರಕಿಹೊಳಿ, ಡಿ.ಕೆ.ಶಿವಕುಮಾರ್‌ ಅವರನ್ನು ಬ್ಲ್ಯಾಕ್‌ ಮೇಲರ್‌ ಎಂದು ಜರಿದಿದ್ದಾರೆ. ಇದೇ ವೇಳ ಸಿದ್ದರಾಮಯ್ಯ, ಖರ್ಗೆ ಹಾಗೂ ಪರಮೇಶ್ವರ್‌ ಒಳ್ಳೆಯವರು. ಆದ್ರೆ ಅವರದ್ದೇ ಕಾಂಗ್ರೆಸ್‌ನಲ್ಲಿ ಏನೂ ನಡೆಯಲ್ಲ ಎಂದರು. ನಾವು ಯುದ್ಧ ಮಾಡೋದು ಷಡ್ಯಂತ್ರ ಮಾಡೋರಲ್ಲ ಅಂತ ರಮೇಶ್‌ ಜಾರಕಿಹೊಳಿ ಇದೇ ವೇಳೆ ಟಾಂಗ್‌ ಕೊಟ್ಟಿದ್ದಾರೆ.

Share Post