CrimeDistricts

ಶಿವಮೂರ್ತಿ ಶ್ರೀಗೆ ಮತ್ತೊಂದು ಸಂಕಷ್ಟ; ಮತ್ತೊಂದು ಪೋಕ್ಸೋ ಪ್ರಕರಣ ದಾಖಲು

ಮೈಸೂರು; ಇಬ್ಬರು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರ ವಿರುದ್ಧ ಮತ್ತೊಂದು ದೂರು ದಾಖಲಾಗಿದೆ. ಮಠದ ವಿದ್ಯಾರ್ಥಿ ನಿಲಯದಲ್ಲಿದ್ದ ಬಾಲಕಿಯೊಬ್ಬರು ಶ್ರೀಗಳ ವಿರುದ್ಧ ಲೈಂಗಿಕ ಕಿರುಕುಳ ದೂರು ನೀಡಿದ್ದಾರೆ. ಒಡನಾಡಿ ಸಂಸ್ಥೆ ಬೆಂಬಲ ಪಡೆದು ಬಾಲಕಿ ಪೋಷಕರು, ಮೈಸೂರಿನ ನಜರಾಬಾದ್‌ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲು ಮಾಡಿದ್ದಾರೆ.

ಬಾಲಕಿ ಹಾಗೂ ಪೋಷಕರು ಒಡನಾಡಿ ಸಂಸ್ಥೆಯನ್ನು ಭೇಟಿ ಮಾಡಿ, ತಮ್ಮ ಗೋಳು ತೋಡಿಕೊಂಡಿದ್ದರು. ಒಡನಾಡಿ ಸಂಸ್ಥೆಯ ಬೆಂಲದೊಂದಿಗೆ ಮೈಸೂರು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಎದುರು ಪೋಷಕರೊಂದಿಗೆ ಬಾಲಕಿ ಹಾಜರಾಗಿದ್ದರು. ಶರಣರಿಂದ ತನಗಾಗಿರುವ ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಳು. ಮಕ್ಕಳ ಕಲ್ಯಾಣ ಸಮಿತಿಯ ಆದೇಶದ ಮೇರೆಗೆ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಈ ಕೇಸ್‌ ಕೂಡಾ ಚಿತ್ರದುರ್ಗಕ್ಕೆ ವರ್ಗಾವಣೆ ಮಾಡಲಾಗುತ್ತದೆ.

Share Post