ಪಂಚಮಸಾಲಿ ಸಮುದಾಯದ ಮೀಸಲಾತಿ ವಿಚಾರ; 10 ದಿನ ಗಡುವು ಕೇಳಿದ ಸಿಎಂ
ಬೆಳಗಾವಿ; ಪಂಚಮಸಾಲಿ ಸಮುದಾಯಕ್ಕೆ ೨ಎ ಮೀಸಲಾತಿ ನೀಡುವ ಬಗ್ಗೆ ರಾಜ್ಯ ಸರ್ಕಾರ ಇವತ್ತೂ ತೀರ್ಮಾನಕ್ಕೆ ಬಂದಿಲ್ಲ. ಸಿಎಂ ಬೊಮ್ಮಾಯಿ ಇನ್ನೂ ಹತ್ತು ದಿನಗಳ ಗಡುವು ಕೇಳಿದ್ದಾರೆ.
ಪಂಚಮಸಾಲಿ ಸಮುದಾಯದ ಮುಖಂಡರು ಸಿಎಂ ಅವರನ್ನು ಭೇಟಿ ಮಾಡಿದ್ದು, ಈ ವೇಳೆ ಸಿಎಂ ಇನ್ನೂ ಹತ್ತು ದಿನ ಟೈಂ ಕೊಡಿ, ನಿಮ್ಮ ಸಮಸ್ಯೆ ಬಗ್ಗೆ ಸ್ಪಷ್ಟ ನಿರ್ಧಾರ ಮಾಡುತ್ತೇನೆ ಎಂದಿದ್ದಾರೆ.
ಸಿಎಂ ಬೊಮ್ಮಾಯಿ ಮಾತಿಗೆ ಯಾವುದೇ ಪ್ರತಿಕ್ರಿಯೆ ನೀಡದ ಪಂಚಮಸಾಲಿ ಸಮಾಜದ ನಾಯಕರು, ವೇದಿಕೆಯಲ್ಲೇ ನಿರ್ಧಾರ ತಿಳಿಸ್ತೀವಿ ಅಂತ ಅಲ್ಲಿಂದ ತೆರಳಿದ್ದಾರೆ.