ಬೇಬಿ ಬೆಟ್ಟ ನಮಗೆ ಸೇರಿದ ಆಸ್ತಿ; ಟ್ರಯಲ್ ಬ್ಲಾಸ್ಟ್ ಬೇಡ ಎಂದ ಪ್ರಮೋದಾದೇವಿ
ಮೈಸೂರು; ಬೇಬಿ ಬೆಟ್ಟ ನಮ್ಮ ಆಸ್ತಿ. ಹೀಗಾಗಿ ಅಲ್ಲಿ ನಮ್ಮ ಅನುಮತಿ ಇಲ್ಲದೆ ಯಾವುದೇ ಟ್ರಯಲ್ ಬ್ಲಾಸ್ಟ್ ಮಾಡುವ ಹಾಗಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಹೇಳಿದ್ದಾರೆ. ಈ ಬಗ್ಗೆ ಸಿಎಂಗೆ ಪತ್ರ ಬರೆದಿದ್ದ ಅವರು, ನಂತರ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ.
ಬೇಬಿ ಬೆಟ್ಟ ನಮ್ಮದು ಎನ್ನುವುದಕ್ಕೆ ನಮ್ಮ ಬಳಿ ದಾಖಲೆಗಳಿವೆ. ಬೇಬಿ ಬೆಟ್ಟದ 1,623 ಎಕರೆ ನಮಗೆ ಸೇರಿದ ಖಾಸಗಿ ಆಸ್ತಿ. ಕೇಂದ್ರ ಸರ್ಕಾರ ಹಾಗೂ ರಾಜಮನೆತನದ ನಡುವೆ ಆದ ಒಪ್ಪಂದದಂತೆ ಈ ಆಸ್ತಿ ನಮಗೆ ಬಂದಿದೆ. ಹೀಗಾಗಿ ನಮ್ಮ ಅನುಮತಿ ಪಡೆಯದೇ ಹೇಗೆ ಬ್ಲಾಸ್ಟ್ ಮಾಡುತ್ತೀರಾ ಎಂದು ಅವರು ಸರ್ಕಾರವನ್ನು ಪ್ರಶ್ನೆ ಮಾಡಿದ್ದಾರೆ.