ಸಿದ್ದರಾಮಯ್ಯ ಕಾಲದಲ್ಲಿ ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯಿತು; ಅರುಣ್ ಸಿಂಗ್
ಮೈಸೂರು; ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಇದ್ದಾಗ ರಾಜ್ಯದಲ್ಲಿ ಕಿಂಚಿತ್ತೂ ಅಭಿವೃದ್ಧಿಯಾಗಲಿಲ್ಲ. ಅವರ ಕಾಲದಲ್ಲಿ ಪಿಎಫ್‌ಐ ಮಾತ್ರ ಅಭಿವೃದ್ಧಿಯಾಯಿತು ಅಂತ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಆರೋಪ ಮಾಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಇದ್ದಾಗ ರಾಜ್ಯದಲ್ಲಿ ನೆಗೆಟಿವ್ ವಾತಾವರಣ ಇತ್ತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಹಿಂದೂಗಳ ಹತ್ಯೆಯಾಗಿತ್ತು. ಆ ಸಮಯದಲ್ಲಿ ಪಿಎಫ್‌ಐ ಹಾವಳಿ ತುಂಬಾನೇ ಹೆಚ್ಚಿತ್ತು ಎಂದು ಅರುಣ್ ಸಿಂಗ್ ಹೇಳಿದರು. ಇನ್ನು ಕಾಂಗ್ರೆಸ್‌ನವರು ಮುಸ್ಲಿಮರಿಗೆ ನಾಲ್ಕು ಪರ್ಸೆಂಟ್ ಮೀಸಲಾತಿ ನೀಡಿದ್ದರು. ಅದನ್ನು ತೆಗೆದು ನಾವು ಒಕ್ಕಲಿಗರು, ಲಿಂಗಾಯತರಿಗೆ ತಲಾ ಎರಡು ಪರ್ಸೆಂಟ್ ನೀಡಿದ್ದೇವೆ ಎಂದು ಹೇಳಿದರು.
ರಾಜ್ಯದ ಜನರ ಹಿತ ಕಾಪಾಡಬೇಕಾದರೆ ರಾಜ್ಯದಲ್ಲಿ ಡಬಲ್ ಎಂಜಿನ್ ಸರ್ಕಾರ ಇರಬೇಕು. ರಾಮದಾಸ್ ಅವರು ಸತತವಾಗಿ ನಾಲ್ಕು ಬಾರಿ ಶಾಸಕರಾಗಿದ್ದರು. ಈಗ ಆ ಕ್ಷೇತ್ರದಲ್ಲಿ ಶ್ರೀವತ್ಸ ಅವರಿಗೆ ಟಿಕೆಟ್ ನೀಡಿದ್ದೇವೆ. ಹೀಗೆ ಮಾಡೋದು ಬಿಜೆಪಿಗೆ ಮಾತ್ರ ಸಾಧ್ಯ. ರಾಮದಾಸ್ ಅವರು ಟಿಕೆಟ್ ಸಿಗದಿದ್ದರೂ ಬಿಜೆಪಿಯಲ್ಲೇ ಉಳಿದು ಕೆಲಸ ಮಾಡುತ್ತಿದ್ದಾರೆ ಎಂದು ಹಾಡಿಹೊಗಳಿದ್ದಾರೆ.