DistrictsPolitics

ಅಂದು ಡಿಸ್ಕವರಿ ಇಂಡಿಯಾ.. ಇಂದು ಭಾರತ್‌ ಜೋಡೋ..

ಚಾಮರಾಜನಗರ; ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯವರು ರಾಜ್ಯದಲ್ಲಿ ಯಾತ್ರೆ ಮಾಡಲು ಪ್ರತಿ ಬಾರಿಯೂ ಗಡಿ ಜಿಲ್ಲೆ ಚಾಮರಾಜನಗರವನ್ನೇ ಆಯ್ಕೆ ಮಾಡಿಕೊಂಡು ಬಂದಿದ್ದಾರೆ. ಇದೀಗ ಅವರು ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಮೂಲಕ ರಾಜ್ಯದಲ್ಲಿ ಭಾರತ್‌ ಜೋಡೋ ಯಾತ್ರೆ ಶುರು ಮಾಡಿದ್ದಾರೆ. ಈ ಹಿಂದೆ ಕೂಡಾ ಅವರು ಚಾಮರಾಜನಗರ ಜಿಲ್ಲೆಯಲ್ಲಿ ಯಾತ್ರೆಯೊಂದನ್ನು ಮಾಡಿದ್ದರು. ಅದರ ಹೆಸರು ಡಿಸ್ಕವರಿ ಇಂಡಿಯಾ.

   2008ರಲ್ಲಿ ರಾಹುಲ್‌ ಗಾಂಧಿ ಡಿಸ್ಕವರಿ ಇಂಡಿಯಾ ಎಂಬ ಯಾತ್ರೆ ಮಾಡಿದ್ದರು. ರಾಜ್ಯದಲ್ಲಿ ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನ ಬೆಟ್ಟದಿಂದ ರಾಹುಲ್‌ ಗಾಂಧಿ ಈ ಯಾತ್ರೆ ಶುರು ಮಾಡಿದ್ದರು.

  ಬಿಳಿಗಿರಿರಂಗನ ಬೆಟ್ಟದ ಮುತ್ತುಗದ ಗದ್ದೆ ಪೋಡಿನ ಜಡೇಗೌಡ ಅವರ ಮನೆಯಲ್ಲಿ ಗೆಣಸು, ರೊಟ್ಟಿ ತಿಂದು ಜೇನು ಸವಿಯುವ ಮೂಲಕ 2008ರ ಮಾ. 25ರಂದು ಡಿಸ್ಕವರಿ ಇಂಡಿಯಾ ಯಾತ್ರೆ ಆರಂಭವಾಗಿತ್ತು. ಅನಂತರ ವಿವೇಕಾನಂದ ಗಿರಿಜನ ಕೇಂದ್ರದಲ್ಲಿ ಆದಿವಾಸಿಗಳ ಜೊತೆಗೆ ಸಂವಾದ ನಡೆಸಿದರು.

   ಈ ಯಾತ್ರೆಗೂ ಮೊದಲು ಚಾಮರಾಜನಗರ ಜಿಲ್ಲೆ ಜನತಾ ಪರಿವಾರದ ಭದ್ರಕೋಟೆಯಾಗಿತ್ತು. ಆದ್ರೆ ಡಿಸ್ಕವರಿ ಇಂಡಿಯಾ ಯಾತ್ರೆಯ ನಂತರ ಚಚಾಮರಾಜನಗರ ಲೋಕಸಭಾ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳನ್ನು ಕಾಂಗ್ರೆಸ್‌ ಕೀನ್‌ ಸ್ವೀಪ್‌ ಮಾಡಿತ್ತು. ಅಷ್ಟೇ ಏಕೆ, ದಶಕಗಳ ನಂತರ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನೂ ಕಾಂಗ್ರೆಸ್‌ ತನ್ನದಾಗಿಸಿಕೊಂಡಿತ್ತು.

ಈ ಹಿನ್ನೆಲೆಯಲ್ಲಿ ಭಾರತ್‌ ಜೋಡೋ ಯಾತ್ರೆ ಮತ್ತೆ ಕಾಂಗ್ರೆಸ್‌ ಚೈತನ್ಯ ತುಂಬುತ್ತೆ ಎಂಬ ಲೆಕ್ಕಾಚಾರದಲ್ಲಿ ಕಾಂಗ್ರೆಸ್‌ ನಾಯಕರಿದ್ದಾರೆ.
Share Post