Districts

ಅ,25ರಂದು ಕೇತುಗ್ರಸ್ತ ಸೂರ್ಯಗ್ರಹಣ; ಘಾಟಿ ದೇಗುಲ ಬಂದ್‌

ಚಿಕ್ಕಬಳ್ಳಾಪುರ; ಅಕ್ಟೋಬರ್ 25ರಂದು ಕೇತು ಗ್ರಸ್ತ ಸೂರ್ಯಗ್ರಹಣ ಸಂಭವಿಸಲಿದೆ. ಈ ಹಿನ್ನೆಲೆಯಲ್ಲಿ ದೊಡ್ಡಬಳ್ಳಾಪುರ ಬಳಿಯ ಘಾಟಿಸುಬ್ರಮಣ್ಯಸ್ವಾಮಿ ದೇವಾಲಯವನ್ನು ಆ ದಿನ ಬಂದ್ ಮಾಡಲಾಗುತ್ತಿದೆ.

ಈ ಕುರಿತು ದೇವಾಲಯ ಕಾರ್ಯ ನಿರ್ವಾಹಣಾಧಿಕಾರಿ ಪ್ರಕಟಣೆ ಹೊರಡಿಸಿದ್ದಾರೆ. ಅಕ್ಟೋಬರ್ 25ರ ಮಂಗಳವಾರ ಸಂಭವಿಸುವ ಕೇತು ಗ್ರಸ್ತ ಸೂರ್ಯಗ್ರಹಣ ಹಿನ್ನಲೆ ಘಾಟಿ ಸುಬ್ರಮಣ್ಯಸ್ವಾಮಿ ದರ್ಶನಕ್ಕೆ ಬೆಳಗ್ಗೆ 10:30 ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಅನಂತರ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share Post