ನಂದಿ ಬೆಟ್ಟದಲ್ಲಿ ಹೊಸ ವರ್ಷಾಚರಣೆಗೆ ನಿಷೇಧ
ಚಿಕ್ಕಬಳ್ಳಾಪುರ : ಹೊಸ ವರ್ಷ ಬಂತೆಂದರೆ ರಾತ್ರೀಯಿಡಿ ನಂದಿ ಬೆಟ್ಟಕ್ಕೆ ಹೋಗುತ್ತಿದ್ದ ಪ್ರವಾಸಿಗರಿಗೆ ಈ ವರ್ಷ ಶಾಕಿಂಗ್ ಸುದ್ದಿಯೊಂದು ಲಭ್ಯವಾಗಿದೆ. ಡಿಸೆಂಬರ್ ೩೦ ಸಾಯಂಕಾಲ ೬ರಿಂದ ಜನವರಿ ೨ರ ಬೆಳಗ್ಗೆ ವರೆಗೂ ನಂದಿ ಬೆಟ್ಟಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
ಬೆಂಗಳೂರು, ಬೆಂಗಳೂರು ಗ್ರಾಮಾಂತರ, ತುಮಕೂರು ಸುತ್ತಮುತ್ತಲಿನ ಜನರ ಫೇವರಿಟ್ ಸ್ಪಾಟ್ ಆಗಿರುವ ನಂದಿ ಹಿಲ್ಸ್‌ಗೆ ಹೊಸವರ್ಷದ ಸಮಯದಲ್ಲೀ ಸಾವಿರಾರು ಮಂದಿ ವಿಸಿಟ್ ಮಾಡ್ತಾರೆ. ಅಹಿತಕರ ಘಟನೆಗಳನ್ನು ತಡೆಯುವ ಸಲುವಾಗಿ, ಓಮಿಕ್ರಾನ್ ಹರಡುವಿಕೆಯನ್ನು ತಡೆದು ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.