CrimeDistricts

ಮುರುಘಾ ಮಠದ ಶಿವಮೂರ್ತಿ ಮತ್ತೆ ಅರೆಸ್ಟ್‌; 4 ದಿನದ ನಂತರ ಮತ್ತೆ ಜೈಲಿಗೆ!

ದಾವಣಗೆರೆ; ಪೋಕ್ಸೋ ಕಾಯ್ದೆಯಡಿ ಬಂಧಿತನಾಗಿ 14 ತಿಂಗಳು ಜೈಲುವಾಸ ಅನುಭವಿಸಿ ನಾಲ್ಕು ದಿನದ ಹಿಂದಷ್ಟೇ ಜೈಲಿನಿಂದ ಬಿಗಡೆಯಾಗಿದ್ದ, ಚಿತ್ರದುರ್ಗದ ಮುರುಘಾಮಠದ ಶಿವಮೂರ್ತಿಯನ್ನು ಮತ್ತೆ ಬಂಧಿಸಲಾಗಿದೆ. ದಾವಣಗೆರೆಯ ವಿರಕ್ತ ಮಠದಲ್ಲಿ ಆಶ್ರಯ ಪಡೆದಿದ್ದ ಶಿವಮೂರ್ತಿಯನ್ನು ಚಿತ್ರದುರ್ಗ ಪೊಲೀಸರು ಬಂಧಿಸಿದ್ದು, ಚಿತ್ರದುರ್ಗಕ್ಕೆ ಕರೆತರುತ್ತಿದ್ದಾರೆ. ಶಿವಮೂರ್ತಿ ವಿರುದ್ಧ ಎರಡು ಕೇಸ್‌ಗಳಿದ್ದು, ಅದರಲ್ಲಿ ಒಂದು ಕೇಸ್‌ಗಷ್ಟೇ ಜಾಮೀನು ಸಿಕ್ಕಿತ್ತು. ಎರಡನೇ ಕೇಸ್‌ನಲ್ಲಿ ಅರೆಸ್ಟ್‌ ವಾರಂಟ್‌ ಜಾರಿ ಮಾಡುವಂತೆ ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ಇಂದು ಬೆಳಗ್ಗೆಯಷ್ಟೇ ಆದೇಶ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶಿವಮೂರ್ತಿಯನ್ನು ಬಂಧಿಸಲಾಗಿದೆ.

ಶಿವಮೂರ್ತಿ ವಿರುದ್ಧ ಎರಡು ಪೋಕ್ಸೋ ಕೇಸ್‌ಗಳು ದಾಖಲಾಗಿದ್ದು, ಮೊದಲ ಕೇಸ್‌ನಲ್ಲಿ ಜಾಮೀನು ಸಿಕ್ಕಿತ್ತು. ಆದ್ರೆ ಎರಡನೇ ಕೇಸ್‌ನ ಜಾಮೀನು ಅರ್ಜಿ ವಿಚಾರಣೆ ನಡುವೆಯೇ ಶಿವಮೂರ್ತಿಯನ್ನು ಬಿಡುಗಡೆ ಮಾಡಲಾಗಿತ್ತು. ಆದ್ರೆ ಇದಕ್ಕೆ ಸರ್ಕಾರಿ ವಕೀಲರು ಆಕ್ಷೇಪ ವ್ಯಕ್ತಪಡಿಸಿದ್ದರು. 2ನೇ ಪೋಕ್ಸೋ ಕೇಸಲ್ಲಿ ಶಿವಮೂರ್ತಿಗೆ ಬಂಧನದ ವಾರಂಟ್‌ ಜಾರಿ ಮಾಡಬೇಕೆಂದು ಸರ್ಕಾರಿ ವಕೀಲ ಜಗದೀಶ್ ವಾದಿಸಿದ್ದರು. ಮುರುಘಾ ಶ್ರೀ ಪರ ವಕೀಲರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದರೂ ಕೂಡಾ ಒಪ್ಪದ ಕೋರ್ಟ್‌, ಶಿವಮೂರ್ತಿ ಬಂಧನಕ್ಕೆ ಆದೇಶ ಹೊರಡಿಸಿತ್ತು.

1ನೇ ಪೋಕ್ಸೋ ಕೇಸಲ್ಲಿ ಹೈಕೋರ್ಟ್ ನಿಂದ ಷರತ್ತುಬದ್ಧ ಜಾಮೀನು ಪಡೆದ ಕಾರಣ ಮತ್ತೆ ಅವರ ಬಂಧನದ ಅಗತ್ಯವಿಲ್ಲ. ಬಂಧನ ವಾರೆಂಟ್ ಹೈಕೋರ್ಟ್ ಆದೇಶ ಉಲ್ಲಂಘನೆ ಆಗುತ್ತದೆಂದು ಮುರುಘಾಶ್ರೀ ಪರ ವಕೀಲ ಉಮೇಶ್ ವಾದಿಸಿದ್ದರು. ಆದ್ರೆ ಕೇರಳದ ಪ್ರಕರಣವೊಂದರ ಉಲ್ಲೇಖದನ್ವಯ ಅರೆಸ್ಟ್ ವಾರೆಂಟ್ ಜಾರಿ ಮಾಡುವಂತೆ ಕೋರ್ಟ್ ಸೂಚಿಸಿತ್ತು.

 

Share Post