Districts

ಮಸೀದಿ ಮೇಲೆ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದ ಮಕ್ಕಳು

ತುಮಕೂರು; ತುಮಕೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಲೆಗಟ್ಟಿದೆ. ಇಲ್ಲಿ ಮನೆ ಮನೆಗಳ ಮೇಲೂ ರಾಷ್ಟ್ರಧ್ವಜ ಹಾರಾಡುತ್ತಿದೆ. ಇನ್ನೂ ವಿಶೇಷ ಏನು ಅಂದ್ರೆ, ಇಲ್ಲಿನ ಗೂಡ್‌ಶೆಡ್‌ ಕಾಲೋನಿಯಲ್ಲಿ ಮಕ್ಕಳು ಮಸೀದಿ ಮೇಲೆ ರಾಷ್ಟ್ರ ಧ್ವಜವನ್ನು ಹಾರಿಸಿ ಸಂಭ್ರಮಿಸಿದ್ದಾರೆ.

ಗೂಡ್‌ಶೆಡ್‌ ಕಾಲೋನಿಯ ಮೀನಾ ಮಸೀದಿ ಮೇಲೆ ಮಕ್ಕಳೆಲ್ಲಾ ಸೇರಿ ತ್ರಿವರ್ಣ ಧ್ವಜ ಹಾರಿಸಿದರು. ರಾಷ್ಟ್ರಗೀತೆಯನ್ನು ಹಾರಿಸಿ ದೇಶಕ್ಕೆ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು.

ಮೀನಾ ಮಸೀದಿ ಆಡಳಿತ ಮಂಡಳಿಯಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಇದೇ ವೇಳೆ ಗಾಂಧಿ, ಅಂಬೇಡ್ಕರ್‌ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ದೀಪ ಬೆಳಗಿದರು.

 

Share Post