CrimeNational

ಹಳಿ ತಪ್ಪಿದ ಗೂಡ್ಸ್‌ ರೈಲಿನ 8 ಬೋಗಿಗಳು; ರೈಲು ಸಂಚಾರದಲ್ಲಿ ವ್ಯತ್ಯಯ

ಚೆನ್ನೈ; ತಮಿಳುನಾಡಿನಲ್ಲಿ ಗೂಡ್ಸ್‌ ರೈಲೊಂದು ಹಳಿ ತಪ್ಪಿದೆ. ಸುಮಾರು ಎಂಟು ಬೋಗಿಗಳು ಹಳಿ ತಪ್ಪಿದ್ದು, ರೈಲು ಸಂಚಾರದಲ್ಲಿ ವ್ಯತ್ಯಯ ಆಗಿದೆ. ವಿಲ್ಲುಪುರಂನಿಂದ ತೊಂಡೈರ್‌ಪೇಟ್‌ಗೆ ತೆರಳುತ್ತಿದ್ದ ರೈಲಿನ ಬೋಗಿಗಳು ತಮಿಳುನಾಡಿನ ಚೆಂಗಲ್ಪಟ್ಟು ಬಳಿ ತಪ್ಪಿದ್ದು, ಅವಾಂತರಕ್ಕೆ ಕಾರಣವಾಗಿದೆ. 

ಈ ರೈಲು 38 ಬೋಗಿಗಳನ್ನು ಹೊಂದಿದ್ದು, ಕಬ್ಬಿಣದ ಅದಿರು, ಲೋಹದ ಹಾಳೆಗಳು ಹಾಗೂ ಕಬ್ಬಿಣದ ರಾಡ್‌ಗಳನ್ನು ಸಾಗಿಸಲಾಗುತ್ತಿತ್ತು. ಬೋಗಿಗಳು ಹಳಿ ತಪ್ಪಿದ್ದರಿಂದ ಆ 8 ಬೋಗಿಗಳಲ್ಲಿದ್ದ ಕಬ್ಬಿಣದ ವಸ್ತುಗಳು ಹಳಿಗಳ ಮೇಲೆ ಬಿದ್ದಿವೆ. ಇದರಿಂದಾಗಿ ಈ ಭಾಗದಲ್ಲಿ ಓಡಾಡುವ ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ.

 

Share Post