DistrictsPolitics

ಮಾಜಿ ಸಚಿವ ರೇವಣ್ಣ ವಿರುದ್ಧ ಸಿಡಿದೆದ್ದ ಶಾಸಕ ಶಿವಲಿಂಗೇಗೌಡ!

ಬೆಳಗಾವಿ; ರೇವಣ್ಣರನರವೇ ನಿಮ್ಮದು ಮಾನಗೆಟ್ಟ ಬುದ್ಧಿ, ನೀಚಗೆಟ್ಟ ಬುದ್ಧಿ, ನಿಮಗೆ ಮಾನ ಮರ್ಯಾದೆ ಇಲ್ವೇನ್ರಿ ಎಂದು ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ ಪ್ರಸಂಗ ಬೆಳಗಾವಿ ಅಧಿವೇಶನದಲ್ಲಿ ನಡೆದಿದೆ. 

ಬೆಳಗಾವಿ ಅಧಿವೇಶನದ ಇಂದಿನ ಕಲಾಪದ ವೇಳೆ ಜೆಡಿಎಸ್ ಸದಸ್ಯ ಹೆಚ್.ಡಿ ರೇವಣ್ಣ ವಿರುದ್ಧ ಕಾಂಗ್ರೆಸ್ ಸದಸ್ಯ ಶಿವಲಿಂಗೇಗೌಡ ಆಕ್ರೋಶ ವ್ಯಕ್ತಪಡಿಸಿರು. ಕೊಬ್ಬರಿಗೆ ಬೆಂಬಲ ಬೆಲೆ ಕುರಿತು ಶಾಸಕ ಶಿವಲಿಂಗೇಗೌಡರು ಮಾತನಾಡಲು ಮುಂದಾಗಿದ್ದಾರೆ. ಈ ವೇಳೆ ಅಡ್ಡಬಂದ ರೇವಣ್ಣ ಅವರು, ತಮಗೆ ಮಾತಾಡೋದಕ್ಕೆ ಅವಕಾಶ ನೀಡುವಂತೆ ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸಿಟ್ಟಿಗೆದ್ದ ಶಿವಲಿಂಗೇಗೌಡರು ಮೇಲಿನಂತೆ ಮಾತಣಾಡಿದ್ದಾರೆ.

ಈ ಗಲಾಟೆ ಇನ್ನೂ ಕೊಂಚ ಮುಂದೆ ಹೋಗಿ ಏಕವಚನದಲ್ಲೂ ವಾಗ್ದಾಳಿಯಾಯಿತು.  ಹೇಯ್ ರೇವಣ್ಣ ನಿನ್ನಿಂದ ನನ್ನನ್ನು ಏನು ಮಾಡೋಕೆ ಆಗಲ್ಲ ಎಂದರು.ಶಿವಲಿಂಗೇಗೌಡರ ಮಾತಿಗೆ ಜೆಡಿಎಸ್‌ ಸದಸ್ಯರು ಪ್ರತಿಭಟನೆ ನಡೆಸಿದರು.

Share Post