ಬಂಡೀಪುರದಲ್ಲಿ ಜನರ ನಿದ್ದೆಗೆಡಿಸಿದ್ದ ಪುಂಡಾನೆ ಕೊನೆಗೂ ಸೆರೆ
ಮೈಸೂರು; ಕಾಡಂಚಿನ ಗ್ರಾಮಗಳ ಜನರ ನಿದ್ದೆಗೆಡಿಸಿದ್ದ ಕಾಡಾನೆ ಸೆರೆಯಾಗಿದೆ. ಬಂಡೀಪುರ ಅಭಯಾರಣ್ಯ ವ್ಯಾಪೀಯ ಗೋಪಾಲ ಸ್ವಾಮಿ ಬೆಟ್ಟ ಮತ್ತು ಮದ್ದೂರು ವಲಯಗಳ ಕಾಡಂಚಿನ ಗ್ರಾಮಗಳ ರೈತರ ಜಮೀನುಗಳಿಗೆ ದಾಳಿ ಮಾಡಿ ಅಪಾರ ಪ್ರಮಾಣದ ಬೆಳೆನಾಶವಾಗಿತ್ತು,ಜನರ ಮೇಲೂ ಆನೆ ದಾಳಿ ನಡೆಸುತಿತ್ತು. ಈಗ ಆ ಪುಂಡ ಕಾಡಾನೆ ಗೋಪಾಲಸ್ವಾಮಿ ಬೆಟ್ಟ ವಲಯ ವ್ಯಾಪೀಯ ಕಡೈಕೋಟೆ ಸಮೀಪ ಸೆರೆಯಾಗಿದೆ.
ಅಭಿಮನ್ಯು, ಮಹೇಂದ್ರ, ಭೀಮ, ಗಣೇಶ್ ಸಾಕಾನೆಗಳನ್ನ ಬಳಸಿ ಕಾರ್ಯ ಚರಣೆ ನಡೆಸಲಾಯಿತು.ಹಾಗೆ ಪಶು ವೈದ್ಯರಾದ ಡಾ.ಮುಜೀಬ್, ಡಾ.ವಾಸೀಂ, ಡಾ.ರಮೇಶ್ ಹಾಗು ಶೂಟರ್ ಸಹಾಯಕ ಅಕ್ರಂ ಹಾಗು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.ಸತತ ಮೂರು ದಿನಗಳಿಂದ ಆನೆ ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸಲಾಯಿತು. ಆನೆಗೆ ಅರವಳಿಕೆ ಮದ್ದು ನೀಡಿದ ಬಳಿಕ ನಿತ್ರಾಣಗೊಂಡ ಆನೆಯನ್ನ ನಾಲ್ಕು ಮೂಲಕ ಹಾಗು
ಕ್ರೈನ್ ಬಳಸಿ ಲಾರಿಗೆ ಶಿಫ್ಟ್ ಮಾಡಲಾಯಿತು.ನಂತರ ಸೆರೆಯಾದ ಆನೆಯನ್ನು ಲಾರಿ ಮೂಲಕ ಕಲ್ಕರೆ ವಲಯದ ಬಳಿಯ ರಾಂಪುರ ಆನೆ ಶಿಬಿರಕ್ಕೆ ರವಾನೆ ಮಾಡಿದ್ದಾರೆ.