Districts

ರಸ್ತೆ ಮಧ್ಯೆ ಹುಲಿ ಪ್ರತ್ಯಕ್ಷ; ದುಗ್ಗಹಳ್ಳಿ, ಶೆಟ್ಟಿಹಳ್ಳಿ ಗ್ರಾಮಸ್ಥರಲ್ಲಿ ಆತಂಕ

ಮೈಸೂರು; ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಿಂದ ಶೆಟ್ಟಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆ ಮಧ್ಯ ಹುಲಿ ಪ್ರತೇಕ್ಷವಾಗಿದೆ. ಹುಲಿಯನ್ನ ನೋಡಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕಗೊಂಡಿದ್ದಾರೆ. ಹುಲ್ಲಹಳ್ಳಿಯಿಂದ ಶೆಟ್ಟಹಳ್ಳಿ ಗ್ರಾಮಕ್ಕೆ ತೆರಳುತ್ತಿದ್ದ ಆಟೋ ಚಾಲಕನ ಮೊಬೈಲ್‌ನಲ್ಲಿ ರಸ್ತೆ ದಾಟುತ್ತಿದ್ದ ಹುಲಿ ದೃಶ್ಯ ಸೆರೆಯಾಗಿದೆ.

ಮೈಸೂರು ಭಾಗದಲ್ಲಿ ಹೆಚ್ಚಿರುವ ಚಿರತೆ ಹಾವಳಿಯಿದ ಕಂಗಾಲಾಗಿದಗದ ಜನ ಇದೀಗ ಹುಲಿ ಪ್ರತ್ಯಕ್ಷದಿಂದಾಗಿ ಇನ್ನೂ ಆತಂಕಕ್ಕೆ ಒಳಗಾಗಿದ್ದಾರೆ. ಈ ಹಿಂದೆ ಬಳ್ಳೂರುಹುಂಡಿ ಗ್ರಾಮದ ರೈತರೊಬ್ಬರ ಮೇಲೆ ಹುಲಿ ದಾಳಿ ಮಾಡಿತ್ತು.ಹುಲ್ಲಹಳ್ಳಿ ಭಾಗದಲ್ಲಿ ಚಿರತೆ, ಹುಲಿಗಳ ಹಾವಳಿ ಹೆಚ್ಚಾಗಿದ್ದು, ರೈತರು ಸಾಕಿದ ಪ್ರಾಣಿಗಳನ್ನು ಬಲಿ ತೆಗೆದುಕೊಳ್ಳುತ್ತಿದೆ.ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ, ಹುಲಿ ಸೆರೆ ಹಿಡಿಯಬೇಕು ಎಂದು ಗ್ರಾಮಸ್ಥರ ಒತ್ತಾಯಿಸಿದ್ದಾರೆ.

Share Post