CrimeDistricts

ಇಸ್ಪೀಟ್‌ ಆಡುತ್ತಲೇ ಕುಸಿದುಬಿದ್ದು ವ್ಯಕ್ತಿ ಸಾವು

ಮೈಸೂರು; ಸ್ಥಳೀಯ ಜೆಡಿಎಸ್‌ ಮುಖಂಡರೊಬ್ಬರು ಇಸ್ಪೀಟ್‌ ಆಡುತ್ತಾ ಕುಸಿದುಬಿದ್ದು ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಮೈಸೂರು-ಬೆಂಗಳೂರು ರಸ್ತೆಯ ರಿಕ್ರಿಯೇಶನ್ ಕ್ಲಬ್‍ನಲ್ಲಿ ಈ ಘಟನೆ ನಡೆದಿದ್ದು, ಮೃತರನ್ನು ಅಶ್ವಥ್‌ ಚಿಯಾ ಎಂದು ಗುರುತಿಸಲಾಗಿದೆ.

ಕ್ಲಬ್‌ನಲ್ಲಿ ಇಸ್ಪೀಟ್‌ ಆಡುವ ವೇಳೆ ಅಶ್ವಥ್‌ ಕುಸಿದುಬಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದ್ರೆ ಪರೀಕ್ಷೆ ಮಾಡಿದ ವೈದ್ಯರು ಅಶ್ವಥ್‌ ಸಾವನ್ನಪ್ಪಿದಾರೆ ಎಂದು ತಿಳಿಸಿದ್ದಾರೆ. ಅಶ್ವಥ್‌ ಅವರು ಕುಸಿದು ಬೀಳುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಮೈಸೂರಿನ ಮಂಡಿ ಮೊಹಲ್ಲಾ ನಿವಾಸಿಯಾಗಿದ್ದ ಅಶ್ವಥ್‌ ಈ ಮೊದಲು ಜೆಡಿಎಸ್‌ನಲ್ಲಿ ಗುರುತಿಸಿಕೊಂಡಿದ್ದರು. ಆದ್ರೆ ಇತ್ತೀಚೆಗೆ ಅವರು ರಾಜಕೀಯ ಬಿಟ್ಟು ಬೇರೆ ವ್ಯವಹಾರ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.

Share Post