ತುಮಕೂರು ಜಿಲ್ಲಾ ಉಸ್ತುವಾರಿ ನೀಡದಿದ್ದಕ್ಕೆ ಮಾಧುಸ್ವಾಮಿ ಅಸಮಾಧಾನ
ತುಮಕೂರು: ನಿನ್ನೆ ಸಿಎಂ ಬಸವರಾಜ್ ಬೊಮ್ಮಾಯಿಯವರು ಕೋವಿಡ್ ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನಿ ಬಿಡುಗಡೆ ಮಾಡಿದ್ರು. ಅದರಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹಾಗೂ ಕಂದಾಯ ಸಚಿವ ಆರ್.ಅಸೋಕ್ ಹೆಸರು ಕೈ ಬಿಡಲಾಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಮಾಧುಸ್ವಾಮಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.
ತುಮಕೂರು ಜಿಲ್ಲಾ ಉಸ್ತುವಾರಿ ಸಿಗದಿದ್ದಕ್ಕೆ ಮಾಧುಸ್ವಾಮಿ ಬೇಸರಗೊಂಡಿದ್ದಾರೆ. ಇಂದು ಜೆ.ಸಿ.ಪುರದಲ್ಲಿ ಮಾತನಾಡಿದ ಅವರು, ಇದರಲ್ಲಿ ಯಾವುದೇ ಪಿತೂರಿ ಮತ್ತೊಂದು ಇಲ್ಲ.ನನಗೆ ಉಸ್ತುವಾರಿ ನೀಡದ ವಿಚಾಋವನ್ನು ದೊಡ್ಡದು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಉಸ್ತುವಾರಿ ನೀಡುವ ಮುನ್ನ ಸಿಎಂ ನನ್ನ ಜೊತೆ ಮಾತುಕತೆ ನಡೆಸಿ ಯಾವ ಜಿಲೆಯ ಉಸ್ತುವಾರಿ ಬೇಕೆಂದು ಕೇಳಿದ್ರು. ವಸ್ತುಸ್ಥಿತಿ ತಿಳಿಯದ ಜಿಲ್ಲೆಯ ಜವಾಬ್ದಾರಿ ಬೇಡ ಅಂತ ನಾನೇ ಹೇಳಿದ್ದೆ.
ಬೇರೆ ಜಿಲ್ಲೆಗೆ ಹೋಗಿ ಕೆಲಸ ಮಾಡುವುದಕ್ಕೆ ಸಾಧ್ಯವಿಲ್ಲ ಕೊಟ್ಟರೆ ನಮ್ಮ ಜಿಲ್ಲೆಯನ್ನೇ ಕೊಡಿ ಎಂದು ಕೇಳಿದ್ದ. ಉಸ್ತುವಾರಿ ವಿಚಾರದಲ್ಲಿ ಎಲ್ಲರಿಗೂ ಅನ್ವಯವಗುವಂತೆ ಸಿಎಂ ನಿರ್ಧಾರ ತೆಗೆದುಕೊಂಡಿದ್ದಾರೆ. ಈಶ್ವರಪ್ಪನವರು ಶಿವಮೊಗ್ಗ ಉಸ್ತುವಾರಿ ಕೇಳಿದ್ರು, ಅಶೋಕ್ ಬೆಂಗಳೂರು ನಗರ ಉಸ್ತುವಾರಿ ಕೇಳಿದ್ರು ನಾನು ಕೂಡ ಬೇರೆ ಜಿಲ್ಲೆಗೆ ಹೋಗಬಾರದು ಅಂತ ಏನಿಲ್ಲ. ಅಲ್ಲಿನ ಸ್ಥಿತಿಗತಿ ಅರಿಯದ ಹೋಗೋದು ಸರಿಯಲ್ಲ.
ತುಮಕೂರಿನ ಆಳ, ಅಗಲ ಏನೆಂದು ನನಗೆ ಗೊತ್ತಿದೆ. ಎಲ್ಲಿ ಏನು ಕೆಲಸ ಮಾಡಬೇಕು ಎಂಬುದು ನನಗೆ ಗೊತ್ತಿದೆ. ತುಮಕೂರು ಉಸ್ತುವಾರಿ ಸಿಕ್ಕಿದ್ರೆ ಸಮರ್ಪಕ ಕೆಲಸ ಮಾಡಬಹುದಿತ್ತು. ಉತ್ತಮ ಕೆಲಸ ಮಾಡಿ ಹೆಸರು ಪಡೆಯುವ ನಿರೀಕ್ಷೆ ಇತ್ತು. ಬೇರೆ ಜಿಲ್ಲೆಗೆ ಕೆಟ್ಟ ಹೆಸರು ಪಡೆಯುವ ಯೋಚನೆ ನನಗಿಲ್ಲ ಹಾಗಾಗಿ ಬೇರೆ ಜಿಲ್ಲೆ ಬೇಡ ಎಂದಿದ್ದೆ ಎಂದು ತುಮಕೂರಿನ ಚಿಕ್ಕನಾಯಕನಹಳ್ಳಿಯ ಜೆ.ಸಿ.ಪುರದಲ್ಲಿ ಸಚಿವ ಮಾಧುಸ್ವಾಮಿ ಹೇಳಿದ್ದಾರೆ.