CrimeDistricts

ಶಾಸಕ ತನ್ವೀರ್‌ ಸೇಠ್‌ಗೆ ಜೀವಬೆದರಿಕೆ; ರಘು ಎಂಬಾತನ ವಿರುದ್ಧ ದೂರು

ಮೈಸೂರು; ಶಾಸಕ ತನ್ವೀರ್‌ ಸೇಠ್‌ಗೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಜೀವ ಬೆದರಿಕೆ ಹಾಕಿದ್ದು, ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಹಾಸನ ಜಿಲ್ಲೆ ಸಕಲೇಶಪುರ ನಿವಾಸಿ ರಘು ಎಂಬಾತ ತನ್ವೀರ್‌ ಸೇಠ್‌ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಜೀವಬೆದರಿಕೆ ಹಾಕಿದ್ದಾನೆ ಎಂದು ದೂರಲಾಗಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಿಸಲಾಗಿದೆ.

ಮೈಸೂರಿನಲ್ಲಿ ನೂರು ಅಡಿಯ ಟಿಪ್ಪು ಪ್ರತಿಮೆ ಸ್ಥಾಪನೆ ಮಾಡುವುದಾಗಿ ಶಾಸಕ ತನ್ವೀರ್‌ ಸೇಠ್‌ ಹೇಳಿಕೆ ನೀಡಿದ್ದರು. ಈ ವೇಳೆ ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿದ್ದ ರಘು ಎಂಬಾತ ಹಿಂದೂ ಸಮಾಜದ ಮುಂದೆ ಕ್ಷಮೆ ಕೇಳುವಂತೆ ತನ್ವೀರ್‌ ಸೇಠ್‌ಗೆ ಒತ್ತಾಯಿಸಿದ್ದ. ಕ್ಷಮೆ ಕೇಳದಿದ್ದರೆ 6×3 ಅಡಿ ಫಿಕ್ಸ್ ಎಂದು ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಹಾಗೂ ಅಲ್ಪಸಂಖ್ಯಾತರ ಮನಸ್ಸಿಗೆ ನೋವಾಗುವಂತೆ ರಘು ನಡೆದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮೈಸೂರು ಬೀಡಿ ಮಜ್ದೂರ್ ಅಸೋಸಿಯೇಷನ್ ದೂರು ನೀಡಿದೆ.

Share Post