Districts

ನಾಲವಾರ ಕೋರಿಸಿದ್ದೇಶ್ವರ ಜಾತ್ರೆ: ಆಡಳಿತ ಮಂಡಳಿ ವಿರುದ್ಧ ಎಫ್ಐಆರ್

ಕಲಬುರಗಿ: ಸುಕ್ಷೇತ್ರ ನಾಲವಾರ ಗ್ರಾಮದ ಶ್ರೀಕೋರಿಸಿದ್ದೇಶ್ವರ ರಥೋತ್ಸವ ಸರ್ಕಾರದ ಆದೇಶ ಮೀರಿ ಲಕ್ಷಾಂತರ ಭಕ್ತರ ಜಯಘೋಷದೊಂದಿಗೆ ಅದ್ದೂರಿಯಾಗಿ ಜರುಗಿತು. ಕೋವಿಡ್ ರೂಪಾಂತರಿ ವೈರಸ್ ರಾಜ್ಯವನ್ನು ಆತಂಕಕ್ಕೆ ದೂಡಿದೆ, ಹೀಗಾಗಿ ರಾಜ್ಯ ಸರ್ಕಾರ ಕೆಲ ಮಾರ್ಗಸೂಚಿಗಳನ್ನು ಹೊರಡಿಸಿದೆ. ಆದರೆ ದೇವಸ್ಥಾನದ ಆಡಳಿತ ಮಂಡಳಿ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ನೀಡದೆ ಲಕ್ಷಾಂತರ ಭಕ್ತರನ್ನು ಸೇರಿಸಿ ಅದ್ದೂರಿ ರಥೋತ್ಸವ ನೇರವೇರಿಸಿದ್ದಾರೆ.

ಜಾತ್ರೆಗೂ ಮುನ್ನ ಶಾಂತಿ ಸಭೆ ನಡೆಸಿದ ತಾಲೂಕು ಆಡಳಿತ ಜಾತ್ರೆ ರದ್ದುಪಡಿಸುವಂತೆ ಸೂಚಿಸಿತ್ತು. ಆದರೆ ಆಡಳಿತ ಮಂಡಳಿ ಯಾರಿಗೆ ಏನಾದರೇ ನಮಗೇನು ಎಂಬಂತೆ ವರ್ತಿಸಿ ಅಪಾರ ಪ್ರಮಾಣದ ಭಕ್ತ ಸಂಕುಲದ ನಡುವೆ ರಥೋತ್ಸವ ನೇರವೇರಿಸಿದೆ. ಕನಿಷ್ಠ ಪಕ್ಷ ಮಾಸ್ಕ್ ಕೂಡಾ ಧರಿಸದ ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ತಹಶೀಲ್ದಾರರು, ಪೊಲೀಸರು ಜಾತ್ರೆ ತಡೆಯಲು ಶತ ಪ್ರಯತ್ನ ನಡೆಸಿದ್ದಾರೆ. ಲಘು ಲಾಠಿ ಪ್ರಹಾರ ಕೂಡಾ ಮಾಡಲಾಗಿದೆ. ಯಾವುದಕ್ಕೂ ಜಗ್ಗದೆ ಅದ್ದೂರಿಯಾಗಿ ಜಾತ್ರೆ ನಡೆಸಲಾಗಿದೆ. ಪೊಲೀಸರು ಮೂಕ ಪ್ರೇಕ್ಷಕರಂತೆ ನೋಡುತ್ತ ನಿಲ್ಲುವಂತ ಪರಸ್ಥಿತಿ ನಿರ್ಮಾಣವಾಗಿತ್ತು.

ಆದೇಶ ಮಿರಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ರಥೋತ್ಸವ ನೆರವೇರಿಸಿದಕ್ಕೆ ದೇವಸ್ಥಾನ ಆಡಳಿತ ಮಂಡಳಿಯ ಹತ್ತು ಜನರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ. ಸರ್ಕಾರದ ಮನವಿ ಮತ್ತು ಸೂಚನೆಗೆ ಸ್ಪಂದಿಸದೆ ಅಪಾರ ಪ್ರಮಾಣದ ಭಕ್ತರ ಜೀವದೊಂದಿಗೆ ಆಟವಾಡಿದ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಸ್ವಾಮಿಜಿಗಳ ವರ್ತನೆಗೆ ಸ್ಥಳೀಯ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಇಂತಹ ಸಮಯದಲ್ಲಿ ಈ ರೀತಿಯ ಲಕ್ಷಾಂತರ ಜನರನ್ನು ಸೇರಿಸಿ ಜಾತ್ರೆ ನೆರೆವೇರಿಸುವ ಅನಿವಾರ್ಯತೆ ಏನಿತ್ತು? ಎಂದು ಹೋರಾಟಗಾರರು ದೇವಸ್ಥಾನ ಆಡಳಿತ ಮಂಡಳಿ ವಿರುದ್ಧ ಕೆಂಡ ಕಾರಿದ್ದಾರೆ. ಜಾತ್ರೆಗೆ ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಸಹ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ಇದರಿಂದ ಕೋವಿಡ್ ಪ್ರಕರಣಗಳು ಉಲ್ಬಣಿಸಿದರೆ ಯಾರು ಹೊಣೆಯನ್ನು ಪ್ರಶ್ನೆಮಾಡುತ್ತಿದ್ದಾರೆ‌.

Share Post